ಅಮೃತ ಭಾರತಿ : ಶ್ರೀ ಕೃಷ್ಣ ಜನ್ಮಾಷ್ಟಮಿ ಶೋಭಾಯಾತ್ರೆ

0
3

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶೋಭಾ ಯಾತ್ರೆ ಇದೆ ಬರುವ ದಿನಾಂಕ 16 ಆಗಸ್ಟ್ 2025 ರಂದು ನಡೆಯಲಿದೆ.

ಸುಮಾರು 3000ದಷ್ಟು ವಿದ್ಯಾರ್ಥಿಗಳು ಪೋಷಕರು ಹಾಗೂ ಸಾರ್ವಜನಿಕರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು , ಶ್ರೀ ಅನಂತಪದ್ಮನಾಭ ದೇವಸ್ಥಾನ ಕೆಳಪೇಟೆ ಹೆಬ್ರಿ , ಶ್ರೀ ಗಜಾನನ ಕ್ಯಾಶ್ಯೂ ಇಂಡಸ್ಟ್ರೀಸ್ ಕುಚ್ಚೂರು ರೋಡ್ ಹೆಬ್ರಿ, ಹಾಗೂ ಬಂಟರ ಭವನ ಆಗುಂಬೆ ರಸ್ತೆ – ಹೀಗೆ ಮೂರು ಕಡೆಗಳಿಂದಲೂ ಏಕಕಾಲದಲ್ಲಿ ಶೋಭಾ ಯಾತ್ರೆ ಹೊರಟು , ಪಟ್ಟಣದಲ್ಲಿ ಸಾಗಿ ಬಂದು ಅಮೃತ ಭಾರತಿ ಮೈದಾನದಲ್ಲಿ ಮೊಸರು ಕುಡಿಕೆ , ಕೋಲಾಟ , ಕುಣಿತ ಭಜನೆ , ಹುಲಿ ಕುಣಿತ ಮುಂತಾದ ಪ್ರದರ್ಶನಗಳೊಂದಿಗೆ ಸಂಪನ್ನಗೊಳ್ಳಲಿದೆ . ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವಂತೆ ಅಮೃತ ಭಾರತಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here