ಸುಳ್ಯದ ಮಾಸ್ಟರ್ ಕ್ರಿಯೇಶನ್ಸ್ ವತಿಯಿಂದ ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ಪ್ರತಿಷ್ಠಿತ ರಂಗಮನೆ ಸಭಾಂಗಣದಲ್ಲಿ ಸಂಗೀತ ಕಲರವ ಸಂಗೀತ ಗಾನ ಸಂಭ್ರಮ ಮ್ಯೂಸಿಕಲ್ ಇವೆಂಟ್ ನಡೆಯಿತು. ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಸುಳ್ಯದ ಎಂ ಬಿ ಫೌಂಡೇಶನ್ ಅಧ್ಯಕ್ಷರಾದ ಎಂ ಬಿ ಸದಾಶಿವ ಅವರು ನಡೆಸಿಕೊಟ್ಟರು ನಂತರ ಗಣಪತಿ ದೇವರ ಭಕ್ತಿ ಗೀತೆ ಒಂದನ್ನು ಹಾಡಿ ಉದ್ಘಾಟನೆಯನ್ನು ಮಂಗಳೂರಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಬ್ರಾಯ ಕಲ್ಪನೆಯವರು ಮಾಡಿದರು.
ಆಮೇಲೆ ಬೇರೆ ಬೇರೆ ಊರುಗಳಿಂದ ಅಂದರೆ ಚಿಕ್ಕಮಗಳೂರು ಬೇಲೂರು ಮಂಗಳೂರು ಬಿ. ಸಿ ರೋಡ್ ಪುತ್ತೂರು ಸುಳ್ಯ ಕಾಸರಗೋಡು ಮುಂತಾದ ಕಡೆಯಿಂದ ಬಂದ ಅನೇಕ ಗಾಯಕರು ಹಾಡುಗಳನ್ನು ಹಾಡಿ ನೃತ್ಯಗಳನ್ನು ಮಾಡಿ ಜನರನ್ನು ರಂಜಿಸಿದರು ಬೆಳಗ್ಗೆ ಉಪಹಾರ ಮಧ್ಯಾಹ್ನ ಊಟ ಸಾಯಂಕಾಲ ಟೀ ವ್ಯವಸ್ಥೆಯನ್ನು ಮಾಡಲಾಗಿತ್ತು ಧ್ವನಿವರ್ಧ ಕ ದ ವ್ಯವಸ್ಥೆ ಉತ್ತಮವಾಗಿತ್ತು ಎಂದು ಅನೇಕರು ಅಭಿಪ್ರಾಯಪಟ್ಟರು ಸುಮಾರು 45 ಗಾಯಕಿ ಗಾಯಕರು ಹಾಡುಗಳನ್ನು ಹಾಡಿದರು. ಪ್ರಥಮ ಬಹುಮಾನವನ್ನು ಸುಬ್ರಹ್ಮಣ್ಯದ ಸಂದೇಶ್ ರವರು , ದ್ವಿತೀಯ ವಿಶ್ವನಾಥ್ ಸುಳ್ಯ, ತೃತೀಯ ಹೇಮಾವತಿ ಮಂಗಳೂರು ಪಡಕೊಂಡರು.ವನ್ನುಕಾರ್ಯಕ್ರಮದ ವ್ಯವಸ್ಥೆಯನ್ನು ಸುಳ್ಯದ ಮಾಸ್ಟರ್ ಕ್ರಿಯೇಶನ್ಸ್ ಮಾಸ್ಟರ್ ಸ್ಟುಡಿಯೋ ಮಾಲಕರಾದ ಸಿಕೆ ಮಾಸ್ಟರ್ ಸುಳ್ಯ ಚೆನ್ನಕೇಶವ ಅವರು ನಡೆಸಿಕೊಟ್ಟರು.