SKDRDP ನಾರಾವಿ ವಲಯ; ಹಲೆಕ್ಕಿಬೆಟ್ಟು ಪ್ರಗತಿ ಬಂಧು ತಂಡದ ಲಾಭಾಂಶ ವಿತರಣೆ

0
116

ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B.C ಟ್ರಸ್ಟ್ (ರಿ.) ಗುರುವಾಯನಕೆರೆ ನಾರಾವಿ ವಲಯದ ಪೆರಾಡಿ ಕಾರ್ಯಕ್ಷೇತ್ರದ ಒಕ್ಕೂಟದ ಪ್ರಸ್ತುತ ವರ್ಷ 40 ಸಂಘಕ್ಕೆ ಒಟ್ಟು ರೂಪಾಯಿ 15,69,265 ಲಾಭಾಂಶ ವಿತರಣೆಯಾಗಿದ್ದು, ಇದರಲ್ಲಿ ಹಲೆಕ್ಕಿಬೆಟ್ಟು ಪ್ರಗತಿ ಬಂಧು ತಂಡದ ಲಾಭಾಂಶ ರೂ 41,526 /ಮೊತ್ತವನ್ನು ಪೆರಾಡಿ ಆಟಿಡೊಂಜಿ ಕೆಸರ್ ದ ಕೂಟ ಸಭಾ ವೇದಿಕೆಯಲ್ಲಿ ಒಕ್ಕೂಟದ ಮಾಜಿ ಸ್ಥಾಪಕ ಅಧ್ಯಕ್ಷರಾದ ಸದಾನಂದ ಶೆಟ್ಟಿ ಸಂಘದ ಸದಸ್ಯರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ನಾರಾವಿ ವಲಯದ ಮೇಲ್ವಿಚಾರಕಿ ವಿಶಾಲ ಕೆ., ನಾರಾಯಣ ಶೆಟ್ಟಿ ಮಾಜಿ ಅಧ್ಯಕ್ಷರು ಗಣೇಶೋತ್ಸವ ಸಮಿತಿ ಪೆರಾಡಿ, ರಾಜೇಂದ್ರ ಜೈನ್ ನಿಕಟಪೂರ್ವ ಸೇವಾ ಪ್ರತಿನಿಧಿ ಪೆರಾಡಿ, ದೇವರಾಜ್ ಶೆಟ್ಟಿ ಮಾಜಿ ಅಧ್ಯಕ್ಷರು ಯುವಕ ಮಂಡಲ ಪೆರಾಡಿ, ಸಂಜೀವ ಶೆಟ್ಟಿ ಗಣೇಶ್ ಸೌಂಡ್ಸ್ ಮಾಲಿಕರು ಪೆರಾಡಿ, ಆನಂದ ಶೆಟ್ಟಿ ಸದಸ್ಯರು ತಾಲೂಕು ಜನಜಾಗೃತಿ ಸಮಿತಿ, ರಂಜಿತ್ ಅಧ್ಯಕ್ಷರು ಪ್ರೆಂಡ್ಸ್ ಕ್ಲಬ್ ಪೆರಾಡಿ, ನಂದಿನಿ ಸೇವಾ ಪ್ರತಿನಿಧಿ ಪೆರಾಡಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here