ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಹೋಬಳಿ ಮಟ್ಟದ ತ್ರೋಬಾಲ್ ಕೂಟಕ್ಕೆ ಟ್ರೋಫಿಗಳ ಕೊಡುಗೆ

0
210

ಕಟೀಲು: ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಹೋಬಳಿ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಬಾಲಕರ ಹಾಗೂ ಬಾಲಕಿಯರ ವಿಭಾಗಕ್ಕೆ ಪ್ರಥಮ ದ್ವಿತೀಯ, ಹಾಗೂ ವೈಯಕ್ತಿಕ ಟ್ರೋಪಿಗಳನ್ನು ನೀಡಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷರಾದ ಅನಿಲ್ ಕುಮಾರ್ ಸಾಂಕೇತಿಕವಾಗಿ ತ್ರೋಬಾಲ್ ನ್ನು ಎಸೆಯುವ ಮೂಲಕ ಉದ್ಘಾಟಿಸಿದರು. ಈ ಮೊದಲು ದೀಪ ಬೆಳಗಿಸಿ ಉದ್ಘಾಟಿಸಿದ ಲಯನ್ ವೆಂಕಟೇಶ ಹೆಬ್ಬಾರ್ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಸರಕಾರಿ ಶಾಲೆಯಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ, ಅನೇಕ ದಾನಿಗಳ ಹಾಗೂ ನಿರ್ಣಯಕರ ಸಹಕಾರದಿಂದ ಮಾತ್ರ ಸಾಧ್ಯ. ಇಂತಹ ಉತ್ತಮ ಕಾರ್ಯ ನೆರವೇರಿಸಿದ ದ ಕ ಜಿ ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಲ್ಲಂಜೆಯ ಪ್ರಾಂಶುಪಾಲರಿಗೂ, ಶಾಲಾ ಅಭಿವೃದ್ಧಿ ಮಂಡಳಿ ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ವಿಶೇಷವಾಗಿ ಸರಕಾರಿ ಶಾಲೆಗಳಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತ್ರೋಬಾಲ್ ಪಂದ್ಯಾಟವನ್ನು ಹೋಬಳಿ ಮಟ್ಟದಲ್ಲಿ ಆಯೋಜಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರತಿಭೆಯನ್ನು ಇನ್ನು ಮುಂದೆ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಬೆಳೆಯಲು ಈ ಕ್ರೀಡಾಕೂಟವು ಸಹಕಾರಿಯಾಗಿದೆ ಅಲ್ಲದೆ ಬಂದಂತಹ 14 ಶಾಲೆ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಲಯನ್ಸ್ ಜಿಲ್ಲಾ ಬ್ಯಾಡ್ಮಿಂಟನ್ ಸಂಯೋಜಕರಾದ ಲಯನ್ ರೋಷನ್ ಡಿಸೋಜ ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು ಕೋಶಾಧಿಕಾರಿ ಲ|ಸಂತೋಷ್ ಕುಮಾರ್ ಲ| ಪ್ರತಿಭಾ ಹೆಬ್ಬಾರ್, ಮುಖ್ಯ ಶಿಕ್ಷಕರಾದ ಜಿಸಿತ ಡಿಸೋಜ, ವಿವಿಲ ಪಿಂಟೋ ಜ್ಯೋತಿ ಕಾರ್ವಿ, ಮೋಹಿನಿ ಎಸ್ ಡಿ ಎಂ ಸಿ ಅಧ್ಯಕ್ಷರು, ಹರಿಶ್ಚಂದ್ರ ಶೆಟ್ಟಿ, ದೈಹಿಕ ಶಿಕ್ಷಕರುಗಳಾದ ಸಂತೋಷ,ಭರತ್, ಕೃಷ್ಣ , ಕಿನ್ನಿಗೋಳಿ ಪಟ್ಟಣ ಪಂಚಾಯಿತಿನ ಬ್ರಹ್ಮಾನಂದ ಮೊದಲಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here