ಉಡುಪಿ: ಶ್ರೀ ರಾಘವೇಂದ್ರ ಗುರುಸಾರ್ವಬೌಮರ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಉಡುಪಿ ರಥಬೀದಿಯಲ್ಲಿರುವ ಶ್ರೀರಾಘವೇಂದ್ರ ಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಉಭಯ ಶ್ರೀಪಾದರಿಂದ ಮಹಾಪೂಜೆ ಹಾಗು ಪಲ್ಲಪೂಜೆ ನೆರವೇರಿತು.
ಸಂಜೆ ರಥಬೀದಿಯಲ್ಲಿ ಶ್ರೀ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗು ಪರ್ಯಾಯ ಉಭಯ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ರಥೋತ್ಸವ ಮತ್ತು ಶ್ರೀ ಕೃಷ್ಣ ಮಠದ ಚಂದ್ರ ಶಾಲೆಯಲ್ಲಿ ವಿಶೇಷ ಪೂಜೆ ನೆರವೇರಿತು.