79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಇದರ ಆವರಣದಲ್ಲಿ ಇರುವ ಧ್ವಜಕಟ್ಟೆ ಯಲ್ಲಿ ಮೂಡುಬಿದಿರೆಯ ಗಣೇಶೋತ್ಸವ ಸೇವಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಯಾದ ಸುದರ್ಶನ ಎಂ. ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷರಾದ ಹರೀಶ್ ಎಂ.ಕೆ ಹಾಗೂ ಕಾರ್ಯದರ್ಶಿ ಭರತ್ ಶೆಟ್ಟಿ ಮತ್ತು zone 4 asst ಗವರ್ನರ್ ಉಮೇಶ್ ರಾವ್ ಮತ್ತು ಮಾಜಿ ಅಧ್ಯಕ್ಷರಾದ ಪೂರ್ಣಚಂದ್ರ ಜೈನ್ ಖಜಾಂಜಿ ಮಹಾವೀರ ಜೈನ್ ಮತ್ತು ಕ್ಲಬ್ಬಿನ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಕೀರ್ತಿ ನಗರ ಅಸೋಸಿಯೇಶನ್ ಅಧ್ಯಕ್ಷರು ಉದಯಕುಮಾರ್ ಮತ್ತು ಸದಸ್ಯರು ಹಾಜರಿದ್ದರು. ರೊ. ಹರೀಶ್ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿ, ರೊ. ಭರತ್ ಶೆಟ್ಟಿ ವಂದಿಸಿದರು.