ಹಳೆಯಂಗಡಿ: ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೈ ಭಾರತ್ ದಕ್ಷಿಣ ಕನ್ನಡ, ಮತ್ತು ರೋಟರಿ ಕ್ಲಬ್ ಬೈಕಂಪಾಡಿ ಜಂಟಿ ಆಶ್ರಯದಲ್ಲಿ, ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು ಹಳೆಯಂಗಡಿ ಪ್ರಾಯೋಜಕತ್ವದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಫೇಮಸ್ ಯೂತ್ ಕ್ಲಬ್ಬಿನ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೇಮಸ್ ಯೂತ್ ಕ್ಲಬ್ಬಿನ ಗೌರವಾಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ ಯವರು ವಹಿಸಿ ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಮತ್ತು ಬಲಿದಾನವನ್ನು ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರ ಪರಿಶ್ರಮದ ದ್ಯೋತಕವಾದ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಂಡು ಹೋಗಬೇಕು ಎಂಬ ಮಾತನ್ನು ಹೇಳಿದರು.
ಧ್ವಜಾರೋಹಕರಾಗಿ ಭಾರತೀಯ ಸೇನೆಯ ಸಿಐಎಸ್ಎಫ್ ನಲ್ಲಿ ಎಸ್ಐ ಆಗಿ ನಿವೃತ್ತರಾಗಿರುವ ಮಾಜಿ ಯೋಧರಾದ ಜಗನ್ನಾಥ್ ಎನ್. ಕೆ ಯವರು ಧ್ವಜಾರೋಹಣವನ್ನು ನೆರವೇರಿಸಿ ಕೊಟ್ಟರು. ದೇಶ ರಕ್ಷಣೆಯ ವಿಚಾರದಲ್ಲಿ ಅನುಭವಿಸಿರುವ ತನ್ನ ಬದುಕಿನ ಅನುಭವಗಳನ್ನು ಹಂಚಿಕೊಂಡರು.
ಮಾಜಿ ಯೋಧರಾದ ಜಗನ್ನಾಥ್ ಎನ್. ಕೆ. ಯವರಿಗೆ ಸಂಸ್ಥೆಯ ವತಿಯಿಂದ ಗೌರವಪೂರ್ಣವಾದ ಸನ್ಮಾನವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂಪತ್ ಜೆ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷರಾದ ಪ್ರೇಮಲತಾ ಯೋಗೀಶ್, ಕಾರ್ಯದರ್ಶಿ ಮೋಹನ್ ದಾಸ್ ದೇವಾಡಿಗ ಮತ್ತು ಕೋಶಾಧಿಕಾರಿ ನವೀನ್ ಚಂದ್ರ, ಮಹಿಳಾ ಮಂಡಲದ ಉಪಾಧ್ಯಕ್ಷರಾದ ಅಮಿತಾ ದಿನಕರ್ ಸಾಲ್ಯಾನ್, ಕಾರ್ಯದರ್ಶಿ ಕುಸುಮ ಎಚ್ ಕೋಟ್ಯಾನ್, ಕೋಶಾಧಿಕಾರಿ ಇಂದಿರಾ ಸಂಜೀವ ಕರ್ಕೇರ ರವರು ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯರಿಗೆ ಫೇಮಸ್ ಸ್ವಾತಂತ್ರ್ಯ ಟ್ರೋಫಿ- 2025 ವಾಲಿಬಾಲ್ ಕ್ರೀಡಾಕೂಟ ಹಾಗೂ ಕ್ಯಾರಂ ಕ್ರೀಡಾಕೂಟವನ್ನು ನೆರವೇರಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಫೇಮಸ್ ಯೂತ್ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರು ರವರು ನಿರೂಪಿಸಿದರು.

