ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ; ಸ್ವಾತಂತ್ರ್ಯೋತ್ಸವ, ಸನ್ಮಾನ-ಪ್ರತಿಭಾ ಪುರಸ್ಕಾರ

0
112

ಮೂಡುಬಿದಿರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಭಾರತಾಂಬೆಯ ಭವ್ಯ ಮೆರವಣಿಗೆಯನ್ನು ಪಥ ಸಂಚಲನದ ಮೂಲಕ ಪೂಪಾಡಿಕಲ್ಲಿನವರೆಗೂ ನಡೆಯಿತು. ನಂತರ ಧ್ವಜಾರೋಹಣವನ್ನು ಶಾಲಾ ಸಂಚಾಲಕರಾದ ಕಡಂದಲೆ ಗುತ್ತು ಸುದರ್ಶನ್ ಶೆಟ್ಟಿ ರವರು ನೆರವೇರಿಸಿದರು.

ಆಡಳಿತ ಮಂಡಳಿಯ ಸದಸ್ಯರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುರೇಂದ್ರ ಭಟ್, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಶಾಲಾ ಸಭಾಂಗಣದಲ್ಲಿ ವಿವಿಧ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಕ್ಕಳು ನೆರವೇರಿಸಿದರು. ಅದರಲ್ಲೂ ಸೈನಿಕನ ಯಶೋಗಾಥೆ ಎಂಬ ಕಾಲ್ಪನಿಕ ನಾಟಕ ಎಲ್ಲರ ಮನ ಮುಟ್ಟುವಂತೆ ಇತ್ತು. ನಂತರ ಸಭಾಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಸುಹಾನಿ, ಶ್ರೇಯ, ಶ್ರದ್ಧಾ, ಹೊಳೆಯಪ್ಪ, ಭೂಮಿಕಾ, ಬಬಿತ ಇವರನ್ನು ಸನ್ಮಾನಿಸಿ ಅವರಿಗೆ ದೇವಣ್ಣ ಭಟ್ ಬಾರಂಗಳ ಇವರ ಸ್ಮರಣಾರ್ಥ ಅಮೇರಿಕಾದಲ್ಲಿರುವ ಹರೀಶ್ ಭಟ್ ಬಾರಂಗಳ ಹಾಗೂ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶಂಕರ ನಾರಾಯಣ ರಾವ್ ಅವರ ಮಗನಾದ ಅವಿನಾಶ್ ರವರು ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿದರು.

ಇದರ ಜೊತೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಅತ್ಯಧಿಕ ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ದಿವಂಗತ ಗಾಯತ್ರಿ ಉಡುಪ ಇವರ ಸ್ಮರಣಾರ್ಥ ಹಾಗೂ ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 3 ವಿದ್ಯಾರ್ಥಿಗಳಿಗೆ ನಿವೃತ್ತ ಮುಖ್ಯ ಶಿಕ್ಷಕರಾದ ಸುಧಾಕರ ರವರು ಪ್ರತಿಭಾ ಪುರಸ್ಕಾರ ವನ್ನು ನೀಡಿ ಗೌರವಿಸಿದರು ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. 2025- 2026 ನೇ ಸಾಲಿನಲ್ಲಿ ಎನ್. ಎಮ್. ಎಮ್. ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನವನೀತ್ ನಾಯ್ಕ ಮತ್ತು ಸುಜನ್ ಆಚಾರ್ಯ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಸದಸ್ಯರಾದ ವೆಂಕಟೇಶ್ ಭಟ್ ಬಾರಂಗಳ ರವರು ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಮುಖ್ಯ ಶಿಕ್ಷಕರಾದ ದಿನಕರ ಕುಂಭಾಶಿ, ನಿವೃತ್ತ ದೈಹಿಕ ಶಿಕ್ಷಕಾರದ ಸದಾಶಿವ ರೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುರೇಂದ್ರ ಭಟ್, ಮುಂಬೈ ನ್ಯಾಯವಾದಿ ಯಾದ ವೆಂಕಟೇಶ್ ಕೋಟ್ಯಾನ್, ಜೆಸಿಐ ವಲಯ ಉಪಾಧ್ಯಕ್ಷರಾದ ಪ್ರಶಾಂತ ಆಚಾರ್ಯ, ಹಿರಿಯರಾದ ವಾಸುದೇವ ಭಟ್, ಜೆಸಿಐ ಮುಂಡ್ಕೂರು ಭಾರ್ಗವದ ಅಧ್ಯಕ್ಷರಾದ ವಸಂತ ಪೂಜಾರಿ ಹಾಗೂ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ರಶ್ಮಿ ರಾಜೇಶ್, ಶಾಲಾ ಶಿಕ್ಷಕರು, ಶಿಕ್ಷಕೇತರ ವೃಂದ, ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಹಾಗೂ ವಿದ್ಯಾರ್ಥಿಗಳಿಗೆ ಪಾಲಡ್ಕ ಗ್ರಾಮ ಪಂಚಾಯಿತಿ, ಸಂತೋಷ್ ಶೆಟ್ಟಿ ಕಡಂದಲೆ ಪರಾರಿ, ದಿನೇಶ್ ಕಾಂಗ್ಲಾಯಿ, ಪುಷ್ಪರಾಜ್ ಶಿಮಂತೂರುಹಾಗೂ ವಿಶ್ವನಾಥ್ ನಾಯ್ಕ ಇವರುಗಳು ಸಿಹಿತಿಂಡಿ ನೀಡಿದರು.

ವರದಿ: ಜಗದೀಶ್‌ ಪೂಜಾರಿ ಕಡಂದಲೆ

LEAVE A REPLY

Please enter your comment!
Please enter your name here