ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜಾಂಬೂರು ಇಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಯೋಧರಿಗೆ ಸನ್ಮಾನ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಅರ್ಥಪೂರ್ಣವಾಗಿ ನೆರವೇರಿತು.
ಸೇವಾ ನಿವೃತ್ತಿ ಹೊಂದಿದ ಹೊಸಂಗಡಿಯ ಯೋಧರಾದ ಕೃಷ್ಣಕುಮಾರ್ ಎಂ. ಇವರನ್ನು ಗೌರವಿಸಿ ಸನ್ಮಾನಿಸಲಾಯಿತು,ಧ್ವಜಾ ರೋಹಣ ಮಾಡಿದ ಮಂಗಳೂರು ಬಿ.ಎಸ್.ಎನ್.ಎಲ್ ಚೀಫ್ ಅಕೌಂಟ್ ಆಫೀಸರ್ ಸೂರ್ಯ ನಾರಾಯಣ ಹೆಗ್ಗೊಡ್ಲು,ಉಳ್ಳೂರು-74 ಗ್ರಾಮಪಂಚಾಯತ್ ಸದಸ್ಯರಾದ ರಾಜೇಶ್ ಹೆಬ್ಬಾರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಭೋಜುಪೂಜಾರಿ ಚಾರಿಟೇಬಲ್ ಟ್ರಸ್ಟ್ ರಿ ಬೆಚ್ಚಳ್ಳಿ ಇದರ ಅಧ್ಯಕ್ಷರಾದ ರಾಜೇಂದ್ರ ಬೆಚ್ಚಳ್ಳಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದಯ ನಾಯ್ಕ, ಹಿರಿಯರಾದ ಶೀನ ನಾಯ್ಕ ಹೆಗ್ಗೊಡ್ಲು, ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ ಬಿ.ಆರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜೇಂದ್ರ ಬೆಚ್ಚಳ್ಳಿಯವರು ಮಾತನಾಡಿ ರೈತರು ಹಾಗೂ ಯೋಧರು ಈ ದೇಶದ ಎರಡು ಮಹಾನ್ ಶಕ್ತಿಗಳು, ಸ್ವಾತಂತ್ರ್ಯ ದಿನಾಚರಣೆಯಂದು ಮಕ್ಕಳ ಎದುರಿನಲ್ಲಿ ಯೋಧರನ್ನು ಗುರುತಿಸಿ ಗೌರವಿಸಿದ್ದು ಮಕ್ಕಳಲ್ಲಿ ದೇಶಾಭಿಮಾನ ಹುಟ್ಟುವಂತೆ ಮಾಡಿದೆ,ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಯೊಂದು ಶಾಲೆಯಲ್ಲಿಯೂ ಇಂತಹ ಕಾರ್ಯಕ್ರಮಗಳು ನಡೆಯಬೇಕು,ದೇಶದ ಗಡಿಯಲ್ಲಿ ಹೋಗಿ ಸೇವೆ ಸಲ್ಲಿಸಿದರೆ ಮಾತ್ರ ದೇಶ ಪ್ರೇಮವಲ್ಲ ಯೋಧರಿಗೆ ನಾವು ಕೊಡುವ ಗೌರವವೂ ಕೂಡ ದೇಶಪ್ರೇಮ ಎಂದರು,ಈ ಸಂದರ್ಭದಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಯೋಧರ ಜೊತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡು ಸಂಭ್ರಮ ಪಟ್ಟರು, ಶಾಲೆಯ ಶಿಕ್ಷಕ ಶಿಕ್ಷಕಿಯರು,ಊರಿನ ವಿದ್ಯಾಭಿಮಾನಿಗಳು, ಪೋಷಕರು ಊರವರು ಉಪಸ್ಥಿತರಿದ್ದರು.