ಪಿಎಫ್‌ಸಿ ಫ್ರೆಂಡ್ಸ್ ಕ್ಲಬ್ 25ನೇ ವರ್ಷದ ಮೊಸರುಕುಡಿಕೆ, ಕ್ರೀಡಾಕೂಟ

0
62

ಮೂಡುಬಿದಿರೆ:ಪೂಪಾಡಿಕಲ್ಲು-ಕಡಂದಲೆ ಪಿಎಫ್‌ಸಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 25ನೇ ವರ್ಷದ ಮೊಸರುಕುಡಿಕೆ ಹಾಗೂ ಕ್ರೀಡಾಕೂಟ ಸ್ಪರ್ಧೆ ಭಾನುವಾರ ನಡೆಯಿತು.
ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಜಗತ್ತಿಗೆ ಜೀವನ ಸಂದೇಶ ನೀಡಿದಾತ ಶ್ರೀಕೃಷ್ಣ. ಈ ಪ್ರದೇಶದಲ್ಲಿ ನಿವೇಶನ ಆಗುವಾಗ ನಾನು ಜನಪ್ರತಿನಿಧಿಯಾಗಿದ್ದೆ.ಇಂದು ಬೇರೆ ಬೇರೆ ಸಮುದಾಯ ಜನರು ಇಲ್ಲಿ ನೆಲೆಸಿದ್ದಾರೆ. ಸೌಹಾರ್ದ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ಸಿಕ್ವೇರ, ಸದಸ್ಯರಾದ ಜಗದೀಶ್ ಕೋಟ್ಯಾನ್, ಕಾಂತಿ ಶೆಟ್ಟಿ, ಶಾಮಿಯಾನ ಮಾಲಕರ ಸಂಘದ ಕಾರ್ಕಳ ತಾಲೂಕು ಓಸ್ವಾಲ್ ಪಿಂಟೊ, ಜೆಸಿಐ ಮುಂಡ್ಕೂರು ಭಾರ್ಗವದ ಪೂರ್ವಾಧ್ಯಕ್ಷ ಸುರೇಂದ್ರ ಭಟ್, ಕೆ.ಕೆ ಡೆಕೋರೇರ‍್ಸ್ ಮಾಲಕ ನಾಗರಾಜ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ಪಿಎಫ್‌ಸಿ ಫ್ರೆಂಡ್ಸ್ ಕ್ಲಬ್ ತಿಮ್ಮಪ್ಪ ಗೌಡ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶ್ರೀಶ ಕಿನ್ನಿಗೋಳಿ ಹಾಗೂ ಸನ್ನಿಧಿ ಮುಂಡ್ಕೂರು ನಿರೂಪಿಸಿದರು.

ವರದಿ: ಜಗದೀಶ್‌ ಪೂಜಾರಿ ಕಡಂದಲೆ

LEAVE A REPLY

Please enter your comment!
Please enter your name here