ಪುತ್ತೂರು: ದೃಶ್ಯ ಪಿಕ್ಚರ್ಸ್ ಅರ್ಪಿಸುವ ಕೀರ್ತನ್ ಶೆಟ್ಟಿ ಸುಳ್ಯ ರವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ವಿನೂತನ ಕಥೆ ಆಧಾರಿತ ಕನ್ನಡ ಕಿರು ಚಿತ್ರ “ಮಾಹಿ” ಈ ಕಿರು ಚಿತ್ರವು ಹಳ್ಳಿ ಹಾಗೂ ಪಟ್ಟಣದ ಮಕ್ಕಳ ಆಸೆ, ಸಂಬಂಧಗಳ ತಿಳುವಳಿಕೆಯನ್ನು ತೋರಿಸುವಂತಹ ಒಂದು ವಿನೂತನ ಕಿರು ಚಿತ್ರವಾಗಿದೆ. ಇನ್ನು ಈ ಕಿರು ಚಿತ್ರಕ್ಕೆ ನಿರ್ಮಾಪಕರಾಗಿ ಅಜಿತ್. ಬಿ.ಟಿ. ರವರು ಬಂಡವಾಳ ಹೂಡಿದ್ದಾರೆ. ಭವಿಷ್ಯತ್.ಸಿ.ಎಸ್. ರವರು ಸಂಗೀತ ನೀಡಿದ್ದು ಸಂಕಲನ ಭಾಗದಲ್ಲಿ ಶ್ರೀನಾಥ್ ಪವಾರ್, ಡ್ರೋನ್ ನಲ್ಲಿ ಅಭುದ್ಯಯ ರವರು ಸಹಾಯಕ ನಿರ್ದೇಶಕರಾಗಿ ಯಶ್ವಿತ್ ಕಾವು, ಸಹ ಬರಹಗಾರರಾಗಿ ಜಯದಿಪ್ ರೈ ಕೊರಂಗಾ, ಸುಪ್ರಿತಾ.ಕೆ.ಎಸ್., ಹಿತಾಶ್ರೀ.ಶೆಟ್ಟಿ. ರವರು ಕಾರ್ಯ ನಿರ್ವಹಿಸಿದ್ದಾರೆ. ಪ್ರಶಾಂತ್ ಶೆನಿ ರವರ ಛಾಯಾಗ್ರಹಣದಲ್ಲಿ ಈ ಮಾಹಿ ಕಿರು ಚಿತ್ರವು ಅದ್ಭುತವಾಗಿ ಮೂಡಿಬಂದಿದೆ.
“ಮಾಹಿ” ಕಿರು ಚಿತ್ರದ ಮುಖ್ಯಭೂಮಿಕೆಯಲ್ಲಿ ದಯಾನಂದ ರೈ ಬೆಟ್ಟಂಪಾಡಿ, ನಿರಂಜನ ರಾವ್, ಜಯದೀಪ್ ರೈ ಕೊರಂಗಾ, ಸುಪ್ರಿತಾ ಕೆ.ಎಸ್, ಸುಷ್ಮಾ ಕೆ.ಎಸ್, ಅವ್ಯೂಕ್ತ್ ಬೇಕಲ್, ಇಶಾನ್.ಬಿ.ಎ, ಸೌಪರ್ಣಿಕ ರೈ, ಹರ್ಶಿತ್ ಅರ್ಬಡ್ಕಾ, ಪ್ರಮೀತ್ ರಾಜ್ ಕಟ್ಟತ್ತಾರ್ ರವರು ನಟಿಸಿದ್ದಾರೆ ಹಾಗೂ ಹಲವಾರು ಬಾಲ ಕಲಾವಿದರು ಅಭಿನಯಿಸಿದ್ದಾರೆಂದು ನಿರ್ದೇಶಕರಾದ ಕೀರ್ತನ್ ಶೆಟ್ಟಿ ಸುಳ್ಯ ರವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.