ಬೆಹರೈನ್: ಮೂಡಬಿದಿರೆಯ ಪ್ರತಿಷ್ಟಿತ ಸೇವಾ ಸಂಘಟನೆ “ಪವರ್ ಫ್ರೆಂಡ್ಸ್ ಬೆದ್ರ” ಬೆಹರೈನ್ ಯೂನಿಟ್ ನೇತೃತ್ವದಲ್ಲಿ ನಡೆದ ಇಂಡಿಪೆಂಡೆನ್ಸ್ ಡೇ ಟ್ರೋಫಿ-2025 ವಾಲಿಬಾಲ್ ಪಂದ್ಯಾಟ ಬಹಳ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರಾದ ಪ್ರಕಾಶ್ ಅಂಚನ್, ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಹಾಗೂ ತುಳು ಕೂಟ ಬೆಹರೈನ್ ಘಟಕದ ಅಧ್ಯಕ್ಷರಾದ ರಾಜಕುಮಾರ್ ಹಾಗೂ ಇನ್ನಿತರ ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
ಬೆಹರೈನ್ ನ ಅಲಿ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಬೆಹರೈನ್ ಬಿಲ್ಲವಾಸ್ ತಂಡ ಪ್ರಥಮ ಬಹುಮಾನ ಪಡೆಯಿತು ಮತ್ತು ರನ್ನೆರ್ಸ್ ಆಗಿ ನಮ್ಮ ಕುಡ್ಲ ತಂಡ ಹಾಗೂ ಬೆಸ್ಟ್ ಆಲ್ ರೌಂಡರ್ ಆಟಗಾರನಾಗಿ ಅಶ್ವಿತ್ ಶೆಟ್ಟಿ ಬೆಸ್ಟ್ ಅಟ್ಯಾಕರ್ ಆಗಿ ಸ್ವಸ್ತಿಕ್ ಬೆಸ್ಟ್ ಪಾಸರ್ ಆಗಿ ನಮ್ಮ ಕುಡ್ಲ ತಂಡದ ನಿತಿನ್ ಗುರುತಿಸಿಕೊಂಡರು.