ತಾಕೊಡೆ: ಕಿಡ್ನಿ ರೋಗಿಯ ನೆರವಿಗೆ ನೀಡಿದ ಚರ್ಚ್ ಪತ್ರದ ದುರುಪಯೋಗ: ವಿನೋದ್ ವಾಲ್ಟರ್ ಪಿಂಟೋ ವಿರುದ್ಧ ಪ್ರಕರಣ ದಾಖಲು

0
151

ಮೂಡುಬಿದಿರೆ: ಪೊಲೀಸ್ ಠಾಣಾ ವ್ಯಾಪ್ತಿಯ ಹೋಲಿ ಕ್ರಾಸ್ ಚರ್ಚ್ ತಾಕೊಡೆ ಕಿಡ್ನಿ ರೋಗಿಯೊಬ್ಬರಿಗೆ ಆರ್ಥಿಕ ನೆರವು ನೀಡುವಂತೆ ಕೋರಿ ನೀಡಿದ್ದ ಪತ್ರವನ್ನು ದುರುಪಯೋಗ ಪಡಿಸಿಕೊಂಡು ಹಣ ವಸೂಲಿ ಮಾಡಿದ ಆರೋಪಿ ವಿನೋದ್ ವಾಲ್ಟರ್ ಪಿಂಟೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗಸ್ಟ್ 18 ರಂದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಲಿ ಕ್ರಾಸ್ ಚರ್ಚ್ ಆರ್ಥಿಕ ಸಮಿತಿ ಸದಸ್ಯರಾದ ಐವಿ ಕ್ರಾಸ್ತಾ ಎಂಬವರು ದೂರು ನೀಡಿದ್ದು ಆರೋಪಿ ವಿನೋದ್ ವಾಲ್ಟರ್ ಪಿಂಟೋ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಕೋಡೆ ಚರ್ಚ್ ಗುರುಗಳಾದ ಫಾ. ರೋಹನ್ ಲೋಬೊರವರು ತಾಕೊಡೆಯ ಸುರ್ಲಾಯ್ ಯಲ್ಲಿ ವಾಸ್ತವ್ಯವಿರುವ ಹೆನ್ರಿ ನೊರೋನ್ಹಾ ರವರ ಮಗನಾದ ಮರ್ವಿನ್ ನೊರೋನ್ಹಾ ಇವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ತಂದೆಯ ಕಿಡ್ನಿಯನ್ನು ವರ್ಗಾಯಿಸಲು ಆರ್ಥಿಕ ನೆರವನ್ನು ಕೋರಿ ಮರ್ವಿ ನೊರೊನ್ಹಾ ಇವರ ಬ್ಯಾಂಕ್ ಖಾತೆ ಸಹಿತ ಒಂದು ಮನವಿ ಪತ್ರವನ್ನು ಚರ್ಚ್ ನ ವಾಟ್ಸಾಪ್ ಗ್ರೂಪ್ ನಲ್ ಹಾಕಿದ್ದು, ಫೋಕಸ್ ಎಂಬ ವಾಟ್ಸಾಪ್ ಗ್ರೂಪಿನ ಅಡ್ಮಿನ್ ಆದ ವಿನೋದ್ ವಾಲ್ಟರ್ ಪಿಂಟೊ ಎಂಬಾತನ ಚರ್ಚ್ ನ ಮನವಿ ಪತ್ರವನ್ನು ದುರುಪಯೋಗಪಡಿಸಿಕೊಂಡು ಮನವಿ ಪತ್ರದಲ್ಲಿದ್ದ ಖಾತೆಯ ವಿವರವ-ಅಳಿಸಿ ಹಾಕಿ ತನ್ನ ಬ್ಯಾಂಕ್ A/C No:64135690981 ಇದರ ವಿವರವನ್ನು ಹಾಕಿ ಫೋಕಸ್ ಎಂಬ ವಾಟ್ಸಾಪ ಗ್ರೂಪ್ ನಲ್ಲಿ ಹಾಕಿ ಹಣ ಸಂಗ್ರಹ ಮಾಡಿಕೊಂಡು ಮೋಸ ವಂಚನೆ ಮಾಡಿರುವುದಾಗಿ ಮೂಡಬಿದ್ರೆ ಠಾಣೆಯಲ್ಲಿ ಅ.ಕ್ರ 128/2025 ಕಲಂ: 314, 318(4) ಬಿ.ಎನ್.ಎಸ್ (ಕಲಂ 403, 420 ಐ.ಪಿ.ಸಿ) ರಂತೆ ಪ್ರಕರಣ ದಾಖಲಾಗಿದೆ. ಆರೋಪಿ ವಿನೋದ್ ವಾಲ್ಮರ್ ಪಿಂಟೋ ಎಂಬಾತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here