
ಬಂಟ್ವಾಳ: ತುಳು ಭಾಷೆ, ಲಿಪಿ, ಸಂಸ್ಕೃತಿ ಮತ್ತು ಪರಂಪರೆಯ ಉಳಿವು ಹಾಗೂ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿರುವ ಜೈ ತುಲುನಾಡ್ (ರಿ.) ಸಂಸ್ಥೆಯ ಬಂಟ್ವಾಳ ಘಟಕದ ಉದ್ಘಾಟನಾ ಕಾರ್ಯಕ್ರಮ ಭಾನುವಾರ (17.08.2025) ಬೆಳಿಗ್ಗೆ 10:30ಕ್ಕೆ ಬಂಟ್ವಾಳದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಉದಯ್ ಪೂಂಜ ತಾರಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ “ಬಂಟ್ವಾಳದಲ್ಲಿ ನಮ್ಮ ಘಟಕ ಸ್ಥಾಪನೆಗೆ ಎರಡು ವರ್ಷಗಳಿಂದಲೇ ಯೋಜನೆ ರೂಪಿಸಿದ್ದೆವು. ಬಂಟ್ವಾಳದಲ್ಲಿ ತುಳು ಪರ ಕೆಲಸಗಳನ್ನು ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ” ಎಂದು ಹೇಳಿದರು.
ಬಂಟ್ವಾಳ ಘಟಕದ ನಿಯೋಜಿತ ಅಧ್ಯಕ್ಷರಾದ ಕಿಶೋರ್ ಪೂಜಾರಿ ಅಧಿಕಾರ ಸ್ವೀಕರಿಸಿ – “ತುಳು ಭಾಷೆ, ಲಿಪಿ, ಸಂಸ್ಕೃತಿ ಮತ್ತು ಸಾಹಿತ್ಯದ ಬೆಳವಣಿಗೆಗೆ ಬಂಟ್ವಾಳದಲ್ಲಿ ಎಲ್ಲರನ್ನು ಒಗ್ಗೂಡಿಸಿ ಮುಂದಾಳತ್ವ ವಹಿಸುವೆವು” ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಲಶೇಖರ ಮೆಸ್ಕಾಂ ಸಹಾಯಕ ಇಂಜಿನಿಯರ್ ಮತ್ತು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೇಶ್ ಬಿ ,ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲಾ ದಲಿತ ನಾಗರಿಕ ಹಿತರಕ್ಷಣಾ ಯುವ ವೇದಿಕೆ ಅಧ್ಯಕ್ಷ ಕೆ ಸತೀಶ್ ಅರಳ, ಸಿನಿಮಾ ನಟ ಹಾಗೂ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ವಿಟ್ಲ ವಿಠಲ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ಮಾಧವ ವಿ.ಎಸ್. ಕಡೇಶಿವಾಲಯ, ಸಿನಿಮಾ ಹಾಗೂ ಕಿರುತೆರೆ ನಟಿ ಐಶ್ವರ್ಯ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2025–26ನೇ ಸಾಲಿನ ಬಂಟ್ವಾಳ ಘಟಕದ ಕಾರ್ಯಕಾರಿ ಸಮಿತಿ ಪ್ರಕಟಿಸಲಾಯಿತು:
ನೂತನ ಘಟಕದ ಹೊಸ ಅಧ್ಯಕ್ಷರಾಗಿ ಕಿಶೋರ್ ಪೂಜಾರಿ, ಉಪಾಧ್ಯಕ್ಷರಾಗಿ ಪ್ರತೀಕ್ ತುಲುವೆ, ಕಾರ್ಯದರ್ಶಿ ಶ್ವೇತಾ ಡಿ. ಬಡಗಬೆಳ್ಳೂರು, ಜೊತೆ ಕಾರ್ಯದರ್ಶಿ ರಂಜಿತಾ ಬಿ. ಶೆಟ್ಟಿ, ಕೋಶಾಧಿಕಾರಿ ರೋಹಿತಾಕ್ಷಿ ತುಲುವೆದಿ ಅನಂತಾಡಿ, ಸಹ ಕೋಶಾಧಿಕಾರಿ ರಕ್ಷಾ ಕೆ., ಸಂಘಟನಾ ಕಾರ್ಯದರ್ಶಿ ರೇಣುಕಾ ಕಣಿಯೂರು, ವಿನ್ಯಾಸ್, ಸಹ ಸಂಘಟನಾ ಕಾರ್ಯದರ್ಶಿ ತ್ರಿಶಾಲಿ, ಕಾರ್ಯಕಾರಿ ಸದಸ್ಯರಾಗಿ ದಿವ್ಯ, ಸುಶ್ಮಿತಾ, ಮಂಜುನಾಥ್, ಸವಿತಾ, ಬಂಟ್ವಾಳ ವಲಯ ಲೇಲೇಲೇಗ – ಸಾಂಸ್ಕೃತಿಕ ಕೂಟದ ಮೇಲ್ವಿಚಾರಕರಾಗಿ ಜನಾರ್ಧನ್ ಪೆರ್ನೆ, ಸಹ ಮೇಲ್ವಿಚಾರಕರಾಗಿ ಪ್ರಸ್ತುತಿ ಆಯ್ಕೆ ಆದರು.
ಕಾರ್ಯಕ್ರಮದ ಅಂಗವಾಗಿ ನೃತ್ಯ, ಸಂಗೀತ ಮತ್ತು ಕವನ ವಾಚನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಸಂಸ್ಥೆಯ ಕೇಂದ್ರ ಸಮಿತಿಯ ಪದಾಧಿಕಾರಿಗಳು, ವಿವಿಧ ಘಟಕಗಳ ಪ್ರತಿನಿಧಿಗಳು, ಘಟಕದ ಸದಸ್ಯರು ಹಾಗೂ ಅನೇಕರು ಹಾಜರಿದ್ದರು.
ರೋಹಿತಾಕ್ಷಿ ತುಲುವೆದಿ ಅನಂತಾಡಿ ಸ್ವಾಗತಿಸಿದರು, ಪ್ರಕೃತಿ ಪ್ರಾರ್ಥಿಸಿದರು, ಕೇಂದ್ರ ಸಮಿತಿ ಯ ಕೋಶಾಧಿಕಾರಿ ರಾಜಶ್ರೀ ಚಂದ್ರಶೇಖರ ಧನ್ಯವಾದ ಅರ್ಪಿಸಿದರು, ಕೇಂದ್ರ ಸಮಿತಿ ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ, ಜನಾರ್ಧನ್ ಪೆರ್ನೆ, ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ಸದಸ್ಯರು ರಾಣಿ ಅಬ್ಬಕ್ಕ ತುಳು ಅಧ್ಯಯನ ಸಂಶೋಧನಾ ಕೇಂದ್ರ, ಬಂಟ್ವಾಳಕ್ಕೆ ಭೇಟಿ ನೀಡಿ, ಡಾ. ತುಕಾರಾಂ ಪೂಜಾರಿ ಅವರಿಂದ ರಾಣಿ ಅಬ್ಬಕ್ಕ ಹಾಗೂ ತುಳು ಬದುಕಿನ ಬಗ್ಗೆ ಮಾಹಿತಿ ಪಡೆದರು.