ಉಡುಪಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸಾಸ್ತಾನ ಇದರ 41ನೇ ವರ್ಷದ ಸಂಭ್ರಮದ ಪ್ರಯುಕ್ತ ಸರಿಸುಮಾರು 20 ವರ್ಷಗಳ ನಂತರ ಮತ್ತೊಮ್ಮೆ ಸಾಸ್ತಾನ ಪರಿಸರದವರಿಗಾಗಿ ನಿಧಿ ಶೋಧನೆ ವಿಶೇಷ ಸ್ಪರ್ಧೆಯು ಆ. 24ರಂದು ಸಂಜೆ 3-00 ಗಂಟೆಯಿಂದ ನಡೆಯಲಿದೆ.
ಮೊದಲು ಶೋಧಿಸಿದವರಿಗೆ ರೂ. ಹತ್ತು ಸಾವಿರ ಮೌಲ್ಯದ ಚಿನ್ನದ ಗಟ್ಟಿ, ಅನಂತರ ಶೋಧಿಸಿದವರಿಗೆ ೫೦೦೦ ಮೌಲ್ಯದ ಚಿನ್ನದ ಗಟ್ಟಿ ಬಹುಮಾನ ವಿದೆ. ಪ್ರವೇಶ ಶುಲ್ಕ ರೂ. ೧೦೦ ಆಗಿದ್ದು ಹೆಸರು ನೋಂದಾಯಿಸಿಕೊಳ್ಳುವ ಮೊದಲ ೩೦ ಜೋಡಿಗಷ್ಟೇ ಅವಕಾಶ ಲಭ್ಯವಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.