ಯುವಾ ಬ್ರಿಗೇಡ್ ಕುಂದಾಪುರದ ವತಿಯಿಂದ ತಹಶಿಲ್ದಾರರಿಗೆ ಮನವಿ

0
25

ಯುವಾ ಬ್ರಿಗೇಡ್ ಕುಂದಾಪುರದ ವತಿಯಿಂದ, ಧರ್ಮಸ್ಥಳದ ಮೇಲೆ ಆಗುತ್ತಿರುವ ಧರ್ಮನಿಂಧನೆ ಹಾಗೂ ಅಪಪ್ರಚಾರಕ್ಕೆ ಮುಖ್ಯ ಕಾರಣೀಕರ್ತರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣ, ಸಮೀರ್ ಎಮ್.ಡಿ ಯನ್ನು ಈ ಕೂಡಲೇ ಬಂಧಿಸುವಂತೆ ಕುಂದಾಪುರದ ತಹಶಿಲ್ದಾರರ ಕಛೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಶಬರಿಮಲೆ, ಶನಿಶಿಂಗಣಾಪುರ ಈಗ ಧರ್ಮಸ್ಥಳ! ಇನ್ನೆಷ್ಟು ಧಾರ್ಮಿಕ ದಾಳಿಯನ್ನು ಸಹಿಸುವುದು ಹೇಳಿ. ಧರ್ಮಸ್ಥಳದ ಪರಿಸ್ಥಿತಿಯೇ ಹೀಗಾದರೆ ನಮ್ಮೂರಿನ ಚಿಕ್ಕಪುಟ್ಟ ಮಠ-ಮಂದಿರಗಳ ಗತಿಯೇನು?. ಇದಕ್ಕೆಲ್ಲ ಅಂತ್ಯ ಹಾಡಲೇಬೇಕಲ್ಲ. ಹಾಗಾಗಿ ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಪ್ರಮೋದ್ ಶಂಕರನಾರಾಯಣ, ವಿನೋದ್ ಶಾಂತಿನಿಕೇತನ, ಕುಂದಾಪುರ, ಸಂತೋಷ್ ಶೆಟ್ಟಿ ಕೊಂಜಾಡಿ, ಭರತ್ ಬಸ್ರೂರು, ಪ್ರಶಾಂತ್ ಬಸ್ರೂರು, ಚೇತನ್ ಖಾರ್ವಿ ಕುಂದಾಪುರ, ಗೋಪಾಲಕೃಷ್ಣ ಶಾಂತಿನಿಕೇತನ, ಚೈತನ್ಯ ಪೂಜಾರಿ ಕುಂದಾಪುರ, ಸುಬ್ರಹ್ಮಣ್ಯ ಕುಂದಾಪುರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here