ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ರಾಷ್ಟ್ರ ಮಾನ್ಯತಾ ದಿನಾಚರಣೆ

0
17

ಕೊಂಕಣಿ ಭಾಷಿಕರು ದೇಶದಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿದ್ದರೂ, ರಾಷ್ಟ್ರ ಕಟ್ಟುವ ಎಲ್ಲಾ ಸ್ಥರಗಳಲ್ಲಿಯೂ ತಮ್ಮ ಇರುವನ್ನು ತರ‍್ಪಡಿಸುವ ಕಾರಣದಿಂದಾಗಿ ಕೊಂಕಣಿ ಭಾಷೆಯು ಸಂವಿಧಾನದ ಸ್ಥಾನ ಮಾನ ಪಡೆಯುವಂತಾಯಿತು ಎಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿದ ಕೊಂಕಣಿಯ ರಾಷ್ಟ್ರ ಮಾನ್ಯತಾ ದಿನಾಚರಣೆಯ ಬೀಜ ಭಾಷಣ ನೀಡುತ್ತಾ ಗೋವಾದ ಪ್ರಾಚರ‍್ಯರಾದ ಡಾ. ಭೂಷಣ ಭಾವೆ ಅಭಿಪ್ರಾಯ ಪಟ್ಟರು.

ಹಿರಿಯ ಸ್ವಾತಂತ್ಯ್ರ ಧುರೀಣ ಮಟ್ಟಾರ್ ವಿಟ್ಟಲ್ ಕಿಣಿ ದೀಪ ಬೆಳಗಿಸಿ ಆರಂಭಿಸಿದ ಬಳಿಕ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ ನಂದ ಗೋಪಾಲ ಶೆಣೈಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕೇರಳದ ಉಚ್ಚ ನ್ಯಾಯಾಲಯದ ನ್ಯಾಯ ಮರ‍್ತಿ ನಗರೇಶ ಇವರು ಕೊಂಕಣಿ ರಾಷ್ಟ್ರ ಮಾನ್ಯತಾ ದಿನಾಚರಣೆ್ ಬಗ್ಗೆ ವಿಡಿಯೋ ಸಂದೇಶ ನೀಡಿದರು.

ಪೂನಾದ ಕೊಂಕಣಿ ಭಾಷಾ ಕಲಾ ಕೇಂದ್ರದ ಟ್ರಸ್ಟಿ ಅನ್ವಿತ್ ಪಾಠಕ್ ಹಾಗೂ ಸಂಯೋಜಕಿ ಪ್ರಾಚೀ ನವತೇ ಇವರು ತಮ್ಮ ಸಂಸ್ಥೆಯ ಕೊಂಕಣಿ ಚಟುವಟಿಕೆಗಳನ್ನು ವಿವರಿಸಿ, ವಿಷೇಷ ಅತಿಥಿಗಳಾಗಿ ಭಾಗವಹಿಸಿದರು.

ಇದೇ ಸಂರ‍್ಭದಲ್ಲಿ ಇತ್ತೀಚೆಗೆ ಅಗಲಿದ ಭಾಷಾ ಶಾಸ್ತ್ರಜ್ನ ಡಾ. ರೊಕಿ ಮಿರಾಂದಾ ಇವರ ಸಂಸ್ಮರಣರ‍್ಥ ಹಿರಿಯ ಕೊಂಕಣಿ ಸಾಹಿತಿ ಗೋಕುಲದಾಸ್ ಪ್ರಭು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗದ ಮುಖ್ಯಸ್ಥರಾಗಿರುವ ಮೆಲ್ವಿನ್ ರೊಡ್ರಿಗಸ್ ಇವರುಗಳು ದಿವಂಗತ ರೊಕಿ ಮಿರಾಂದರ ಜೀವನ ಮತ್ತು ಕೊಡುಗೆಗಳ ಬಗ್ಗೆ ಉಪನ್ಯಾಸವಿತ್ತರು. ದಿವಂಗತರ ರ‍್ಮ ಪತ್ನಿ ಪುಷ್ಪಾ ಬೊಬಡೆ ಇವರು ಉಪಸ್ಥಿತರಿದ್ದರು. ಹೆಚ್ ಎಮ್ ಪರ‍್ನಾಲ ಈ ಉಪನ್ಯಾಸ ಕರ‍್ಯಕ್ರಮದ ನರ‍್ವಹಣೆ ಮಾಡಿದರು. ಕೊಂಕಣಿ ಮಾನ್ಯತಾ ದಿನಾಚರಣೆಯ ಅಂಗವಾಗಿ ಶಾಲೆಗಳಲ್ಲಿ ತೃತೀಯ ಭಾಷೆ ಕೊಂಕಣಿ ಕಲಿಯುತ್ತಿರುವ ವಿದ್ಯರ‍್ಥಿಗಳಿಗೆ ವಿದ್ಯರ‍್ಥಿ ವೇತನ ವಿತರಣೆ ಮಾಡಲಾಯಿತು.

ಇತ್ತೀಚಿಗೆ ಜಾಗತಿಕ ದಾಖಲೆ ಸ್ಥಾಪಿಸಿದ ಕೊಂಕಣಿಯ ಯುವ ಭರತ ನಾಟ್ಯ ಕಲಾವಿದೆ ರೆಮೊನಾ ಇವೆಟ್ ಪಿರೆರಾ ಇವರನ್ನು ಸನ್ಮಾನಿಸಲಾಯಿತು. ಕೇಂದ್ರದ ಉಪಾಧ್ಯಕ್ಷರಾದ ವಿಲಿಯಂ ಡಿಸೋಜಾ, ರಮೇಶ ಡಿ ನಾಯಕ್, ಟ್ರಸ್ಟಿಗಳಾದ ಗಿಲ್ರ‍್ಟ್ ಡಿಸೋಜಾ, ವತಿಕಾ ಕಾಮತ್ ಕರ‍್ಯರ‍್ಶಿ ಡಾ,ಕಸ್ತೂರಿ ಮೋಹನ ಪೈ, ವಿ.ಕೊ.ಕೇ ಆಡಳಿತ ಅಧಿಕಾರಿ ಡಾ. ಬಿ. ದೇವದಾಸ ಪೈ ಹಾಗೂ ಪರ‍್ಣಾನಂದ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ಇತರ ಗಣ್ಯರು ಉಪಸ್ಥಿತರಿದ್ದರು. ಮೇಘಾ ಪೈ ಕೊಂಕಣಿ ಅಭಿಮಾನ ಗೀತೆಯನ್ನು ಹಾಡಿದರು. ಸುಚಿತ್ರಾ ಎಸ್ ಶೆಣೈ ಕರ‍್ಯಕ್ರಮ ನಿರೂಪಿಸಿದರು. ವಿ.ಕೊ.ಕೇ ಕೋಶಾಧಿಕಾರಿ ಬಿ .ಆರ್ ಭಟ್ ಇವರು ಧನ್ಯವಾದ ಸರ‍್ಪಣೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here