ಮುಂಡ್ಕೂರು: ಜೇಸಿಐ ಮುಂಡ್ಕೂರು ಭಾರ್ಗವದ ವತಿಯಿಂದ ಆ. ೧೯ರಂದು ನಡೆದ “ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ “ಕಾರ್ಯಕ್ರಮದಡಿಯಲ್ಲಿ ಲೈನ್ ಮೆನ್ ಆಗಿ 25 ವರ್ಷದಿಂದ ಹಗಲು ರಾತ್ರಿಯೆನ್ನದೆ ಎಲ್ಲಾ ಸಮಯದಲ್ಲೂ ಕರ್ತವ್ಯ ನಿರತರಾಗಿ , ಆಪತ್ ಬಾಂಧವರಾಗಿ ಮುಂಡ್ಕೂರು ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಚಂದ್ರ ಮುಂಡ್ಕೂರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಳಿಕಸಪ್ತಾಹದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ಕಾರ್ಯ ಕ್ರಮಕ್ಕೆ ವಲಯದ ನಿಕಟಪೂರ್ವ ಅಧ್ಯಕ್ಷರು ಗಿರೀಶ್ SP, ವಲಯ ಉಪಾಧ್ಯಕ್ಷರು ಪ್ರಶಾಂತ್ ಕುಮಾರ್, ನಿಕಟಪೂರ್ವಧ್ಯಕ್ಷರು ಗಣೇಶ್ ಆಚಾರ್ಯ, ಕಾರ್ಯದರ್ಶಿ ಉಮೇಶ್ ನಾಯ್ಕ, ಲೇಡಿ ಜೇಸಿ ಕೋ ಆರ್ಡಿನೇಟರ್ ಸೌಮ್ಯ, ಜೂನಿಯರ್ ಜೇಸಿ ಅಧ್ಯಕ್ಷೆ ತಿರುಮಲಾ, ಪೂರ್ವಾಧ್ಯಕ್ಷರಾದ ಅರುಣ ರಾವ್, ಸುಧಾಕರ ಪೊಸ್ರಾಲ್ , ಸುರೇಂದ್ರ ಭಟ್, ಗಿರೀಶ್ ಆಚಾರ್ಯ, ಪ್ರತಿಮಾ ಟಿ. ಶೆಟ್ಟಿ ಮತ್ತು ಸದಸ್ಯರು ಭಾಗವಹಿಸಿದ್ದರು.