ಉಡುಪಿ: ಭರತನಾಟ್ಯದಲ್ಲಿ ವಿಶ್ವದಾಖಲೆ ಬರೆಯಲು ಹೊರಟ ವಿದುಷಿ ದೀಕ್ಷಾ ವಿ. ಇವರಿಂದ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಕಾರ್ಯಕ್ರಮಕ್ಕೆ ಅಜ್ಜರಕಾಡು ಜಿ. ಶಂಕರ್ ಮಹಿಳಾ ಸ್ನಾತಕೋತರ ಕಾಲೇಜಿನಲ್ಲಿ ನಿಕಟ ಪೂರ್ವ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿದರು.
ನೃತ್ಯವನ್ನು ಎರಡು ಕ್ಯಾಮರಾ ಮೂಲಕ ದಾಖಲೀಕರಣ ಮಾಡಲಾಗುತ್ತಿದೆ. ಆ.30ರಂದು ಮಧ್ಯಾಹ್ನ 3.30ಕ್ಕೆ ಭರತನಾಟ್ಯ ಕೊನೆಗೊಳ್ಳಲಿದೆ. ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ., ನೃತ್ಯಗುರು ವಿದ್ವಾನ್ ಶ್ರೀಧರ ರಾವ್ ಬನ್ನಂಜೆ, ಗೀತಾಂಜಲಿ ಸುವರ್ಣ, ಯಶವಂತ ಎಂ.ಜಿ., ವಿದುಷಿ ಉಷಾ ಹೆಬ್ಬಾರ್, ವಿದುಷಿ ವೀಣಾ ಹೆಬ್ಬಾರ್, ಕಟಪಾಡಿ ಶಂಕರ ಪೂಜಾರಿ, ಪ್ರೊ.ಡಾ.ನಿಕೇತನಾ, ಮಹೇಶ ಠಾಕೂರ್, ಅಶ್ವಿನಿ ಮಹೇಶ ಠಾಕೂರ್, ತಂದೆ ವಿಠ್ಠಲ, ತಾಯಿ ಶುಭಾ, ಪತಿ ರಾಹುಲ್, ವೀಣಾ ಎಸ್.ಶೆಟ್ಟಿ ಉಪಸ್ಥಿತರಿದ್ದರು.