ಮೂಡುಬಿದಿರೆಯಲ್ಲಿ ಆಧಾರ್ ನೋಂದಣಿ-ತಿದ್ದುಪಡಿ, ಆರೋಗ್ಯ, ಅಪಘಾತ ವಿಮಾ ಶಿಬಿರ

0
20

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದರೆ ಕೋ ಆಪರೇಟಿವ್ ಸೊಸೈಟಿ, ಇನ್ನರ್ ವೀಲ್ ಕ್ಲಬ್, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಜಂಟಿ ಆಶ್ರಯದಲ್ಲಿ ಅಗಸ್ಟ್ 23, ನಾಳೆ ಆಧಾರ್ ನೋಂದಣಿ-ತಿದ್ದುಪಡಿ, ಆರೋಗ್ಯ ಮತ್ತು ಅಪಘಾತ ವಿಮಾ ಶಿಬಿರ ನಡೆಯಲಿದೆ. ಎಂಸಿಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ದಿನವಿಡಿ ನಡೆಯುವ ಈ ಶಿಬಿರದಲ್ಲಿ ಸಾರ್ವಜನಿಕರು ಮೇಲ್ಕಂಡ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಹೊಸ ಆಧಾರ್ ನೋಂದಣಿಗೆ ಜನನ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡ್, ಮಗುವಿನ ಜೊತೆ ಪೋಷಕರು ಕಡ್ಡಾಯ ಬರತಕ್ಕದ್ದಾಗಿದೆ.
ಆಧಾರ್ ತಿದ್ದುಪಡಿಗೆ ಪಾನ್ ಕಾರ್ಡ್/ವೋಟರ್ ಐಡಿ/ಪಾಸ್ಪೋರ್ಟ/ರೇಷನ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್/ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ/ಜನನ ಪ್ರಮಾಣ ಪತ್ರ ಅಗತ್ಯ.
ಜನ್ಮ ದಿನಾಂಕ ತಿದ್ದುಪಡಿಗೆ ಪಾಸ್ಪೋರ್ಟ್/ಜನನ ಪ್ರಮಾಣ ಪತ್ರ/ಎಸ್ ಎಲ್ ಸಿ ಪ್ರಮಾಣ ಪತ್ರ/ಪಿಂಚಣಿ ಪಾವತಿಯ ಆದೇಶದ ಮೂಲ ಪತ್ರ/ಸರಕಾರಿ ಸೇವಾ ಗುರುತಿನ ಚೀಟಿ ಅಗತ್ಯ.
ವಿಳಾಸ ಬದಲಾವಣೆಗೆ ವೋಟರ್ ಐಡಿ/ಪಾಸ್ ಪೋರ್ಟ್/ರೇಷನ್ ಕಾರ್ಡ್/ಬ್ಯಾಂಕ್ ಪಾಸ್ ಬುಕ್/ವಾಸ್ತವ್ಯ ದೃಢೀಕರಣ ಪತ್ರಗಳು ಅಗತ್ಯ.
ಎಲ್ಲಾ ದಾಖಲೆಗಳ ಮೂಲ ಪ್ರತಿಯನ್ನು ಜೆರಾಕ್ಸ್ ಪ್ರತಿಯೊಂದುಗೆ ತರಲು ಕಡ್ಡಾಯಗೊಳಿಸಲಾಗಿದೆ.
ಇ-ಮೇಲ್ ತಿದ್ದುಪಡಿ, ಲಿಂಗ ಬದಲಾವಣೆ, ಮೊಬೈಲ್ ಸಂಖ್ಯೆ ತಿದ್ದುಪಡಿಗಳಿಗೆ ಯಾವುದೇ ದಾಖಲೆಗಳ ಅಗತ್ಯ ಇರುವುದಿಲ್ಲ ಎಂದು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here