ದಾವಣಗೆರೆ: ದಾವಣಗೆರೆಯಲ್ಲಿ ನಿರಂತರವಾಗಿ ಯಕ್ಷಗಾನ ಪ್ರದರ್ಶನಗಳಿಂದ ವಾಣಿಜ್ಯನಗರಿ ದಾವಣಗೆರೆ ಸಾಂಸ್ಕೃತಿಕ ನಗರಿಯಾಗುತ್ತಿರುವುದು ಶ್ಲಾಘನೀಯ. ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನ ಮೊಟ್ಟ ಮೊದಲು ಪರಿಚಯಿಸಿದ ದಾವಣಗೆರೆಯ ಯಕ್ಷರಂಗ ಸಂಸ್ಥೆ ನಿಜಕ್ಕೂ ಅಚ್ಚು ಮೆಚ್ಚಿನ ಸಾಧನೆ ಎಂದು ಪ್ರೇರಣಾ ಸಂಸ್ಥೆಯ ಅಧ್ಯಕ್ಷರು, ಮಾಜಿ ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ಇತ್ತೀಚಿಗೆ ದಾವಣಗೆರೆಯ ವಿದ್ಯಾನಗರ ರಸ್ತೆಯ ದೃಶ್ಯ ಕಲಾ ಮಹಾವಿದ್ಯಾಲಯದ ಒಳಾಂಗಣದಲ್ಲಿ ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿ ಖ್ಯಾತ ಕಲಾವಿದರಿಂದ “ಜಗನ್ಮಾತೆ ಶ್ರೀವನ-ದುರ್ಗೆ” ಯಕ್ಷಗಾನ ಪ್ರದರ್ಶನವನ್ನು ಚಂಡೆ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರು, ಯಕ್ಷಗಾನ ಹವ್ಯಾಸಿ ಕಲಾವಿದರಾದ ಸಾಲಿಗ್ರಾಮ ಗಣೇಶ್ ಶೆಣೈ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಶ್ರೀ ಪರುಶು ರಾಮನವರ ಸೃಷ್ಠಿಯಾದ ಕರ್ನಾಟಕ ಕರಾವಳಿ ಜಿಲ್ಲೆಗಳ ಆರಾಧನಾ ಕಲೆ ಯಕ್ಷಗಾನ ದೈವಿ ಕಲೆಯನ್ನು ಅಪ್ಪಟ ಕನ್ನಡವನ್ನು ವಿಶ್ವದ್ಯಾಂತ ವೈಭವೀಕರಿಸುತ್ತಿರುವುದು ಇದು ದೇವರ ಸೇವೆ, ದೇವರ ಪೂಜೆ. ಯಕ್ಷಗಾನ ಪ್ರದರ್ಶನ ಕೇವಲ ಮನರಂಜನೆಗೆ ಸೀಮಿತವಾಗದೇ ಪ್ರೇಕ್ಷಕರಿಗೆ ನಮ್ಮ ದೇಶದ ಪೌರಾಣಿಕ ಪರಂಪರೆಯ ಐತಿಹಾಸಿಕ ಚರಿತ್ರೆ ಮನವರಿಕೆಯಾಗುತ್ತದೆ. ಖಿನ್ನತೆಯ ಮನಸ್ಸುಗಳು ಪುಳಕಿತವಾಗುತ್ತದೆ ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸುರೆಶ್ ವಲ್ಲೆಪೂರಿ, ಮಂದಾರ್ತಿ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿಯ ಮುಖ್ಯಸ್ಥರು, ಖ್ಯಾತ ಯಕ್ಷಗಾನ ಭಾಗವತರಾದ ಸಾದಾಶಿವ ಅಮೀನ್, ಸವಿಡೈನ್ ಮಹೇಶ್ ಶೆಟ್ಟಿಯವರು ಮಾತನಾಡಿ, ದಾವಣಗೆರೆಯ ಸಮಸ್ತ ಜನತೆಯ ಕಲ್ಯಾಣಕ್ಕಾಗಿ ಯಕ್ಷಸೇವೆ ಸಮರ್ಪಣೆ ಎಂದರು. ಯಕ್ಷರಂಗದ ಪ್ರಧಾನ ಕಾರ್ಯದರ್ಶಿ, ಹವ್ಯಾಸಿ ಯಕ್ಷಗಾನ ಕಲಾವಿದರಾದ ಬೇಳೂರು ಸಂತೋಷ್‌ಕುಮಾರ್ ಶೆಟ್ಟಿಯವರು ಅಚ್ಚುಕಟ್ಟಾಗಿ ಕಾರ್ಯಕ್ರಮ ಸ್ವಾಗತ ಮಾಡಿ, ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು. ಸವಿಡೈನ್ ಮಹೇಶ್ ಶೆಟ್ಟಿಯವರ ಬಳಗ ಮತ್ತು ಪ್ರೇರಣಾ ಯುವ ಸಂಸ್ಥೆಯ ಸಂಯಕ್ತಾಶ್ರಯದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಅತ್ಯದ್ಭುತವಾಗಿ ಯಶಸ್ವಿಯಾಗಿ ನಡೆಯಿತು. ನೆರೆದ ಪ್ರೇಕ್ಷಕರು ತಮ್ಮ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.