ಪುಣ್ಯ ಕ್ಷೇತ್ರ ಧರ್ಮಸ್ಥಳವನ್ನು ಅವಮಾನಿಸಿದ ಸೂತ್ರದಾರಿಗಳನ್ನು ಬಂಧಿಸಿ : ನೀರೆ ಕೃಷ್ಣ ಶೆಟ್ಟಿ ಒತ್ತಾಯ

0
70

ಹೆಬ್ರಿ : ಪುಣ್ಯ ಕ್ಷೇತ್ರ ಶ್ರೀ ಧರ್ಮಸ್ಥಳ, ಶ್ರೀ ಮಂಜುನಾಥ ಸ್ವಾಮಿ ಸಾನಿಧ್ಯ ಮತ್ತು ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಕೀರ್ತಿಗೆ ದಕ್ಕೆ ತರಲು ಕಳೆದ ೧ ತಿಂಗಳಿಂದ ಧರ್ಮಸ್ಥಳದಲ್ಲಿ ನಡೆದ ಷಡ್ಯಂತ್ರ, ಸುಳ್ಳು ಆರೋಪ ಹೊರಿಸಿರುವ ಪಾತ್ರದಾರಿಗಳನ್ನು ಮತ್ತು ಅದರ ಸೂತ್ರದಾರಿಗಳನ್ನು ತಕ್ಷಣ ಬಂಧಿಸುವಂತೆ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉಭಯ ಜಿಲ್ಲೆ ಮತ್ತು ರಾಜ್ಯದ ಭಕ್ತರ ಧಾರ್ಮಿಕ ನಂಬಿಕೆ ಮತ್ತು ಕ್ಷೇತ್ರದ ಪಾವಿತ್ರ್ಯತೆಗೆ ದಕ್ಕೆ ತಂದು ಸ್ಥಳೀಯರಲ್ಲಿ ಶಾಂತಿ ಸಹಬಾಳ್ವೆಗೆ ಅಡ್ಡಿ ಪಡಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ನ್ಯಾಯ ಒದಗಿಸುವಂತೆ ಎಸ್‌ಐಟಿ ಮುಖ್ಯಸ್ಥರಿಗೆ, ಮುಖ್ಯಮಂತ್ರಿಯವರಿಗೆ ಮತ್ತು ಗೃಹಸಚಿವರಿಗೆ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here