ಮೂರ್ತಿಪೂಜೆ ಒಪ್ಪದ ಅನ್ಯ ಧರ್ಮದ ಮಹಿಳೆಯಿಂದ ನಾಡಹಬ್ಬದ ಉದ್ಘಾಟನೆ ಖಂಡನಿಯ: ಡಾ. ಎಲ್.ಕೆ. ಸುವರ್ಣ

0
78

ಕರ್ನಾಟಕದ ಕಾಂಗ್ರೆಸ್ ಸರಕಾರವು ಸನಾತನ ಹಿಂದೂ ಧರ್ಮದ ಇತಿಹಾಸ ಪ್ರಸಿದ್ಧವಾದ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯನ್ನುಅನ್ಯಮತಿ ಯ ಹಿಂದೂಗಳ ಮೂರ್ತಿ ಪೂಜೆಯನ್ನು ಒಪ್ಪದ ಭಾನುಮುಸ್ತಕ್ ಎಂಬ ಮುಸ್ಲಿಂ ಮಹಿಳೆಯನ್ನು ಕರೆಸಿ ಉದ್ಘಾಟನೆ ಮಾಡಲು ಹೊರಟಿರುವ ಕ್ರಮ ಹೇಯ ಮತ್ತು ಖಂಡನಿಯವಾಗಿದೆ. ಕೂಡಲೇ ಈ ನಿರ್ಧಾರವನ್ನು ಕರ್ನಾಟಕ ಸರಕಾರವು ಹಿಂಪಡೆಯಬೇಕು ಎಂದು
ಹಿಂದೂ ಮಹಾಸಭಾ – ಕರ್ನಾಟಕ ರಾಜ್ಯ ಘಟಕ ಅಧ್ಯಕ್ಷ ಡಾ. ಎಲ್. ಕೆ. ಸುವರ್ಣ ಅಗ್ರಹಿಸಿದ್ದಾರೆ.

ಕರ್ನಾಟಕದ ವಿಧಾನ ಸಭೆಯಲ್ಲಿರುವ ವಿರೋಧ ಪಕ್ಷವು ಕೂಡ ಈ ನಿರ್ಧಾರವನ್ನು ನೋಡಿ ಗಾಡಮೌನ ವಹಿಸಿ ಹೊರಗಡೆ ಬಂದು ಮಾಧ್ಯಮಕ್ಕೆ ಹೇಳಿಕೆ ನೀಡಿ ಕೈ ತೊಳೆದುಕೊಳ್ಳುವ ರೀತಿ ನೋಡಿದರೆ ಕರ್ನಾಟಕದಲ್ಲಿ ಅಡ್ಜಸ್ಟ್ ಮೆಂಟ್ ರಾಜಕೀಯ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಸಂಸದರು ಈ ಆಯ್ಕೆಯನ್ನು ವಿರೋಧಿಸದೆ ಇರೋದು ಬಿಜೆಪಿಯ ದುರದೃಷ್ಟಕರವಾಗಿದೆ.
ಕೂಡಲೆ ಕರ್ನಾಟಕ ಸರಕಾರವು ದಸರಾ ಉದ್ಘಾಟನೆ ಮಾಡಲು ಹಿಂದೂ ಗಣ್ಯರನ್ನು ಆಯ್ಕೆ ಮಾಡೊದು ಸೂಕ್ತ ಎಂದು ಹಿಂದೂ ಮಹಾಸಭಾ ಕರ್ನಾಟಕ ಘಟಕ ಸಲಹೆ ನೀಡುತ್ತಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here