ಚಿತ್ರಕಲೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಜಯಂತ್ ಕೊಳಂಬೆ

0
91

ಕೈಕಂಬ: ಚಿತ್ರಕಲೆಯು ಮಕ್ಕಳ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು, ಆಲೋಚನೆಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗಿದೆ ಎಂದು ಮುಂಡಾಲ ಸಮಾಜ (ರಿ.) ಕೈಕಂಬ ಇದರ ಅಧ್ಯಕ್ಷರಾದ ಜಯಂತ್ ಕೊಳಂಬೆ ಹೇಳಿದರು.
ಅವರು ದಿನಾಂಕ 24.08..2025 ರಂದು ಮುಂಡಾಲ ಸಮಾಜ ಆಯೋಜಿಸಿದ “ಎನ್ನ ಉಡಲ್ದ ಗಣಪತಿ” ಚಿತ್ರ ಬಿಡಿಸುವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.‌

ಮಕ್ಕಳು ತಮ್ಮ ಆಲೋಚನೆಗಳು, ಭಾವನೆಗಳನ್ನು ಬಣ್ಣಗಳ ಮತ್ತು ರೇಖೆಗಳ ಮೂಲಕ ಮುಕ್ತವಾಗಿ ವ್ಯಕ್ತಪಡಿಸಲು ಚಿತ್ರಕಲೆ ಒಂದು ಉತ್ತಮ ಮಾಧ್ಯಮವಾಗಿದೆ. ಚಿತ್ರಕಲೆಯು ಕಲ್ಪನೆಗಳನ್ನು ಸ್ಪಷ್ಟ ರೂಪಕ್ಕೆ ತರಲು, ಹೊಸ ಆಲೋಚನೆಗಳನ್ನು ಅನ್ವೇಷಿಸಲು ಅವಕಾಶ ನೀಡುತ್ತದೆ, ಇದು ಮಕ್ಕಳ ಮಾನಸಿಕ ಬೆಳವಣಿಗೆಯ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ ಎಂದರು.‌

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನೃತ್ಯ ಶಿಕ್ಷಕಿ ನಿರ್ಮಲಾರವರು ಮಾತನಾಡುತ್ತಾ, ಯಾರೂ ಕೂಡಾ ಅವಕಾಶಕ್ಕಾಗಿ ಕಾಯದೆ ಅದನ್ನು ಸ್ವಯಂ ಸೃಷ್ಠಿಸುವುದರಿಂದ ನಿಶ್ಚಿತ ಗುರಿ ತಲುಪಲು ಸಾಧ್ಯ ಎಂದರು.

ವೇದಿಕೆಯಲ್ಲಿ ಶ್ರೀರಾಮ ಸೇವಾಂಜಲಿಯ ಗೌರವಾಧ್ಯಕ್ಷರಾದ ಸುರೇಶ್ ಸಫಲಿಗ, ನಿವೃತ್ತ ಸಿಬ್ಬಂದಿ ಬ್ಯಾಂಕ್ ಆಫ್ ಬರೋಡ ಕೈಕಂಬ ಶಾಖೆ ,ವೇದವ್ಯಾಸ ಕುಳಾಯಿ, ಬೆಳ್ತಂಗಡಿ ಶಿಶಿಲ ಶಾಖೆ ಬ್ಯಾಂಕ್ ಆಫ್ ಬರೋಡಾದ ಪ್ರಧಾನ ಪ್ರಬಂಧಕರಾದ ಯೋಗೀಶ್ ಕೈಕಂಬ, ಸುರೇಶ್ ಕೈಕಂಬ ,ನಿವೃತ್ತ ಸಿಬ್ಬಂದಿ ಬ್ಯಾಂಕ್ ಆಫ್ ಬರೋಡ ಕೈಕಂಬ ಶಾಖೆ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯ ವರೆಗಿನ ಮಕ್ಕಳಲ್ಲಿ ಪ್ರಥಮ – ಯಶ್ವಿನ್ , ‌‌‌‌ದ್ವಿತೀಯ – ಯುವನ್ , ತೃತೀಯ – ನಿಗಮ್ . ಐದನೇ ತರಗತಿಯಿಂದ ಏಳನೇ ತರಗತಿಯ ವರೆಗೆ ಪ್ರಥಮ – ಮಂಜುನಾಥ ಎಂ , ದ್ವಿತೀಯ – ಭವಿಷ್ , ತೃತೀಯ – ತನ್ವಿ . ಎಂಟರಿಂದ ಹತ್ತನೆಯ ತರಗತಿಯ ವರೆಗಗಿನ ವಿಭಾಗದಲ್ಲಿ ಪ್ರಥಮ -ಯಜ್ಞೇಶ್ , ದ್ವಿತೀಯ – ಚಿರಾಗ್ , ತೃತೀಯ – ಜೀವನ್ ಬಹುಮಾನಗಳನ್ನು ಪಡೆದುಕೊಂಡರು.

ತೀರ್ಪುಗಾರರಾಗಿ ವೃತ್ತಿಪರ ಕಲಾವಿದರಾದ ಹರೀಶ್ ಕೊಡಿಯಲ್ ಬೈಲ್ ಮತ್ತು ಕಿರಣ್ ಕೊಳಂಬೆರವರು ಭಾಗವಹಿಸಿದ್ದರು. ಕು.ಅಕ್ಷತಾ ಪ್ರಾರ್ಥಿಸಿದರು. ಚಂದ್ರಶೇಖರ್ ಧನ್ಯವಾದಗಳನ್ನರ್ಪಿಸಿದರು. ವಿಠಲ್ ಪೇಜಾವರ ನಿರೂಪಿಸಿದರು.

LEAVE A REPLY

Please enter your comment!
Please enter your name here