ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆ; ಅದಿತಿ ಮೆಹೆಂದಳೆ ರಾಜ್ಯಕ್ಕೆ ಪ್ರಥಮ

0
66

ಕರ್ನಾಟಕ ರಾಜ್ಯ ಡಾ. ಗಂಗುಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಪ್ರಮಾಣ ಪತ್ರ ಪ್ರದಾನ ಸಮಾರಂಭ ವಿಶ್ವವಿದ್ಯಾನಿಲಯ ಸಭಾಂಗಣ ಮೈಸೂರು ಇಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅದಿತಿ ಮೆಹೆಂದಳೆ, ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ ಈ ವರ್ಷದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 91.8 % ದೊಂದಿಗೆ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ.‌ ಇವರು ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದ ಸಂಸ್ಥಾಪಕಿ ಮಂಜರಿ ಚಂದ್ರ ಪುಷ್ಪರಾಜ್ ರವರ ಶಿಷ್ಯೆ 30 ಆಗಸ್ಟ್ ರಂದು ಮೈಸೂರು ಯುನಿವರ್ಸಿಟಿಯಲ್ಲಿ ಪ್ರಶಸ್ತಿ ಪತ್ರ ಪ್ರದಾನ ಸಮಾರಂಭ ನಡೆಯಲಿದೆ. ಉಡುಪಿಯ ಕೇಶವ ಮೆಹೆಂದಳೆ ಹಾಗು ರಂಜನಾ ಇವರ ಪುತ್ರಿ. ಪ್ರಸ್ತುತ ಮಣಿಪಾಲದ ಮಾಹೆ ಅಡಿಯಲ್ಲಿ ಬರುವ ಮಣಿಪಾಲ ಇನ್ಸ್ಟಿಟ್ಯೂಟ್ ಓಫ್ ಕಮ್ಯುನಿಕೇಷನ್ ಇಲ್ಲಿ ಬ್ಯಾಚುಲರ್ ಇನ್ ಮೀಡಿಯಾ ಅಂಡ್ ಕಮ್ಯುನಿಕೇಷನ್ ವ್ಯಾಸಂಗ ಮಾಡುತ್ತಿದ್ದಾಳೆ.

ಕಾರ್ಯಕ್ರಮದ ಅಧ್ಯಕ್ಷತೆ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾನ್ಯ ಕುಲಪತಿಗಳು ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯ ಮುಖ್ಯ ಆತಿಥಿಗಳು ಡಾ. ಮೈಸೂರು ಮಂಜುನಾಥ್ ಅಂತರರಾಷ್ಟ್ರೀಯ ಖ್ಯಾತಿಯ ವೈಯಲಿನ್ ವಾದಕ ಹಾಗೂ ಸಂಗೀತ ವಿಜ್ಞಾನಿ, ರೇಖಾ ಕೆ.ವಿ.ಎಸ್. ಹೆಚ್ಚುವರಿ ಅಧ್ಯಾಪಕರಾದವರು ಪ್ರೊ. ಎಂ.ಎನ್. ಮಂಜುನಾಥ್
ಕುಲಸಚಿವರು ದಿನಾಂಕ: 30-08-2025, ಶನಿವಾರ ಸಮಯ: ಬೆಳಗ್ಗೆ 11:30 ಗಂಟೆಗೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here