ಪುತ್ತೂರು: ಮಕ್ಕಳು-ಮಹಿಳೆಯರಿಗೆ ತಾಲೂಕು ಮಟ್ಟದ ವಿವಿಧ ಸ್ಪರ್ಧೆ; ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ

0
169

ಜವಾಹರ್ ಬಾಲ್ ಮಂಚ್ ದಕ್ಷಿಣ ಕನ್ನಡ ಮತ್ತು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಬಾಳ್ತಿಲ ವತಿಯಿಂದ, ಮಕ್ಕಳಿಗೆ ಹಾಗೂ ಮಹಿಳೆಯರಿಗೆ ತಾಲೂಕು ಮಟ್ಟದ ವಿವಿಧ ಸ್ಪರ್ಧೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ವಾತ್ಸಲ್ಯಮಯಿ ಸಂಸ್ಥೆ ಯು ಮಕ್ಕಳ ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಅಲ್ಲದೆ ಜವಹಾರ್ ಬಾಲ್ ಮಂಚ್ ಅನ್ನುವ ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಗಳನ್ನು ನೀಡುತ್ತಿದೆ ವ್ಯಕ್ತಿತ್ವ ವಿಕಸನ ನಾಯಕತ್ವ ಬೆಳವಣಿಗೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ ಎಂದರು.

ಮಾಜಿ ಸಚಿವ ರಮಾನಾಥ ರೈ ಯವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಸಂಸ್ಥೆಯ ಕೆಲಸ ಕಾರ್ಯಗಳು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ರು ಸಂಸ್ಥಾಪಕರು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಮತ್ತು. ಜವಾಹರ್ ಬಾಲ್ ಮಂಚ್ ನ ಜಿಲ್ಲಾಧ್ಯಕ್ಷರು ಶೈಲಜಾ ರಾಜೇಶ್ ವಹಿಸಿ ಮಾತನಾಡಿ ತಮ್ಮ ಸಂಸ್ಥೆ ಮಕ್ಕಳ ಬಗ್ಗೆ ಮತ್ತು ಮಹಿಳೆಯರ ಬಗ್ಗೆ ಅಪಾರವಾದ ಕಾಳಜಿ ಹೊಂದಿ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಷ್ಟೋ ನೊಂದ ಕುಟುಂಬಗಳಿಗೆ ಆಶ್ರಯ ನೀಡುತ್ತಿದೆ. ಎಲ್ಲಾ ಮಕ್ಕಳು ಮಾನವೀಯತೆ ಪ್ರಾಮಾಣಿಕತೆ ಮತ್ತು. ಪ್ರೀತಿ. ವಿಶ್ವಾಸದಿಂದ ಸಂಸ್ಕಾರಯುತ ಜೀವನ ನಡೆಸಬೇಕು ಮತ್ತು ಎಲ್ಲಾ ಮಕ್ಜಳಿಗೂ ಪ್ರತಿಭೆಗೆ ಅವಕಾಶ ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪುತ್ತೂರು ಶಾಸಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜವಾಹರ್ ಬಾಲ್ ಮಂಚ್ ನ ರಾಷ್ಟ್ರೀಯ ಸಂಯೋಜಕರು ನರೇಶ್ ಕುಮಾರ್, ರಾಜ್ಯ ಅಧ್ಯಕ್ಷರು ಮೊಯುನುದ್ದಿನ್,ಸಂಯೋಜಕ ಡಾ.ಸೋಫಿಯಾ ,ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಶೌರ್ಯ, ನ್ಯಾಯವಾದಿ ವಕೀಲರ ಸಂಘದ ಅಧ್ಯಕ್ಷರ ಜಗನ್ನಾಥ್ ರೈ ಬೇಬಿಕುಂದರ್, ಉಷಾ, ಚಂದ್ರಪ್ರಭಾ, ಪ್ರವೀಣ್ ಆಚಾರ್ಯ, ಜಯಶೀಲಾ, ಹಕ್ಕಿಮ್, ಗಿರೀಶ್, ಕಾವ್ಯ ರಾಮಲತ್ ಉಪಸ್ಥಿತರಿದ್ದರು.

ಮಕ್ಕಳು ಮತ್ತು ಮಹಿಳೆಯರು ತಾಲೂಕು ಮಟ್ಟದ ಮುದ್ದು ಕೃಷ್ಣ, ಯಶೋಧ ಕೃಷ್ಣ, ಚಿತ್ರಕಲಾ ಸ್ಪರ್ಧೆ, ಬೆಂಕಿ ಬಳಸದೆ ಅಡುಗೆ ಸ್ಪರ್ಧೆ ಮಹಿಳೆಯರಿಗೆ ಮೆಹಂದಿ ಸ್ಪರ್ಧೆ, ಬೇರೆ ಬೇರೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶೈಲಜಾ ರಾಜೇಶ್ ಸ್ವಾಗತಿಸಿ ಪ್ರವೀಣ್ ಆಚಾರ್ಯ ವಂದಿಸಿ, ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here