ಉಡುಪಿ: ಬ್ರಹ್ಮಾವರ ತಾಲೂಕು ಮುಂಡ್ಕಿನಜಡ್ಡುವಿನ ವಿದುಷಿ ದೀಕ್ಷಾ ವಿ. ಡಾ. ಜಿ.ಶಂಕರ ಮಹಿಳಾ ಕಾಲೇಜಿನ ಪಿಜಿ ಸಭಾಭವನದಲ್ಲಿ ವಿಶ್ವ ದಾಖಲೆಗಾಗಿ 7 ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದು, ಗುರುವಾರ ಸಾಯಂಕಾಲ 5.30ಕ್ಕೆ 170 ಗಂಟೆಗಳ ಗಡಿಯನ್ನು ದಾಟಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಹಿಂದಿನ 170 ಗಂಟೆಗಳ ಗೋಲ್ಡನ್ ಬುಕ್ ಆ ವರ್ಲ್ಡ್ ರೆಕಾರ್ಡ್ ದಾಖಲೆಯನ್ನು ಮೀರಿಸಿದ್ದಾರೆ.
ಆಗಸ್ಟ್ 21 ರಂದು ಮಧ್ಯಾಹ್ನ 3:30ಕ್ಕೆ ನೃತ್ಯ ಪ್ರದರ್ಶನ ಪ್ರಾರಂಭವಾಗಿದ್ದು, ಒಂಬತ್ತು ದಿನಗಳಲ್ಲಿ 216 ಗಂಟೆಗಳ ಕಾಲ ಪೂರ್ಣಗೊಳಿಸುವ ಗುರಿಯನ್ನು ದೀಕ್ಷಾ ಹೊಂದಿದ್ದಾರೆ. ಮಂಗಳೂರಿನ ರೆಮೋನಾ ಎವೆಟ್ಟೆ ಪೆರೇರಾ 170 ಗಂಟೆಗಳ ಭರತನಾಟ್ಯ ಪ್ರದರ್ಶನದೊಂದಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಪ್ರವೇಶಿಸಿದ್ದರು.