ಮೂಡುಬಿದಿರೆ ಭಟ್ಟಾರಕ ಶ್ರೀ ಪಟ್ಟಾಭಿಷೇಕ ವರ್ಧಂತ್ಯುತ್ಸವ

0
11


ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಮೂಡುಬಿದಿರೆ : ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಆ.29ರಂದು ನಡೆಯಲಿದ್ದು ಈ ಹಿನ್ನಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಸಜ್ಜಿತ ಸಿದ್ಧಾಂತ ಮಂದಿರವನ್ನು ನಿರ್ಮಿಸಲಾಗಿದ್ದು ಅಂತಿಮ ಹಂತದಲ್ಲಿದೆ. ಸುಮಾರು 5 ಕೋಟಿ ವೆಚ್ಚದಲ್ಲಿ ಜೈನಮಠದ ಜೀರ್ಣೊದ್ಧಾರಕ್ಕೆ ಚಾಲನೆ ನೀಡಲಾಗುವುದು. ಸುಮಾರು 10 ಲಕ್ಷ ರೂ ವೆಚ್ಚದಲ್ಲಿ 400ರಷ್ಟು ಪ್ರಾಚೀನ ತಾಡ ಓಲೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯವು ನಡೆಯುತ್ತಿದೆ. ಅಲ್ಲದೆ ವಿಕ್ರಮ ಶೆಟ್ಟಿ ಬಸದಿ, ಬೆಟ್ಕೇರಿ ಬಸದಿಗಳ ಜೀರ್ಣೋದ್ಧಾರಕ್ಕೂ ಚಾಲನೆ ನೀಡಲಾಗುವುದು. ಅಲ್ಲದೆ ಸಾವಿರಕಂಬದ ಬಸದಿಯ ಮೇಲ್ಛಾವಣಿಯ ಮೂರನೇ ಅಂತಸ್ತಿನ ದುರಸ್ತಿ ಕಾರ್ಯವೂ ನಡೆಯಲಿದೆ ಎಂದರು.
ಗುರುವಂದನಾ ಕಾರ್ಯಕ್ರಮ
ಜೈನಮಠದ ಸ್ವಾಮೀಜಿಯವರಿಗೆ ದೀಕ್ಷೆ ನೀಡಿದ ಗುರುಗಳನ್ನು ಸ್ಮರಿಸುವ ಸಲುವಾಗಿ ಗುರುವಂದನಾ ಕಾರ್ಯಕ್ರಮವು ಆ.29ರಂದು ಮಧ್ಯಾಹ್ನ 3.00ಕ್ಕೆ ಸಾವಿರಕಂಬದ ಬಸದಿಯಲ್ಲಿ ನಡೆಯಲಿದೆ.
ಪರಮಪೂಜ್ಯ ಆಚಾರ್ಯ 108 ಗುಲಾಬ್ ಭೂಷಣ ಮಹಾರಾಜರು ಆಶೀರ್ವಚನ ನೀಡಲಿದ್ದು ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪಾವನ ಸಾನಿಧ್ಯ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪೇಟಾ ಇಂಡಿಯಾ ಸಂಸ್ಥೆಯು ಕೊಡುಗೆಯಾಗಿ ನೀಡಿದ ಯಾಂತ್ರಿಕ ಆನೆಯನ್ನು ಪೇಟಾ ಇಂಡಿಯಾದ ಸಾರ್ವಜನಿಕ ಸಂಪರ್ಕಾಧಿಕಾರಿ ಅರುಣ್ ಜೈನ್ ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಅಮಿತ್ ಜೈನ್, ಮಣೀಂದ್ರ ಜೈನ್, ಪ್ರೋ. ನಿವೇದಿತಾ ಜೈನ್ ಭಾಗವಹಿಸಲಿದ್ದಾರೆ. ಬಳಿಕ ಯಕ್ಷಗಾನ ತಾಳಮದ್ದಳೆ “ಶರಸೇತು ಬಂಧ” ನಡೆಯಲಿದೆ.

LEAVE A REPLY

Please enter your comment!
Please enter your name here