2025ರಲ್ಲಿ ನಡೆಯುವ ಮೊದಲ ಪೂರ್ಣ ಚಂದ್ರಗ್ರಹಣವು ಸೆಪ್ಟೆಂಬರ್ 7ರಂದು ಸಂಭವಿಸಲಿದ್ದು, ಜ್ಯೋತಿಷ್ಯ ಪ್ರಕಾರ ಇದು ಭಾದ್ರಪದ ಮಾಸದ ಪೌರ್ಣಮೆಯಂದು ನಡೆಯಲಿದ್ದು, ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಇದು ಶುಭಕಾರಣವಾಗಿದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯ ಎನ್ನುತ್ತಾರೆ! ಹಾಗಾದ್ರೆ ಯಾವ ರಾಶಿಗಳಿಗೆ ಏನು ಪ್ರಯೋಜನ ಗೊತ್ತಾ..?
ಭಾದ್ರಪದ ಮಾಸವು ಆರನೇ ತಿಂಗಳು, ಈ ತಿಂಗಳ ಪೌರ್ಣಮೆಯಂದು ರಾಹುವಿನ ಕಾರಣದಿಂದಾಗಿ ಸಂಪೂರ್ಣ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. ಈ ಬಾರಿ ಚಂದ್ರಗ್ರಹಣವು ಭಾರತದಾದ್ಯಂತ ಗೋಚರಿಸಲಿದೆ. ಜ್ಯೋತಿಷಿಗಳ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಇದು ಶುಭಕಾರಣವಾಗಿದರೆ, ಕೆಲವರಿಗೆ ಎಚ್ಚರಿಕೆ ಅಗತ್ಯ. ಯಾವ ರಾಶಿಗಳಿಗೆ ಏನು ಪ್ರಯೋಜನ ಗೊತ್ತಾ..?
ಚಂದ್ರಗ್ರಹಣದ ಸಮಯ
ಚಂದ್ರಗ್ರಹಣವು ಸೆಪ್ಟೆಂಬರ್ 7ರಂದು ರಾತ್ರಿ 9.56ಕ್ಕೆ ವಿಜಯವಾಡದಲ್ಲಿ ಆರಂಭವಾಗುತ್ತದೆ. ಹೈದರಾಬಾದ್‌ನಲ್ಲಿ ಇದು 13 ನಿಮಿಷ ತಡವಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ಸ್ಪರ್ಶಕಾಲ ಎಂದು ಕರೆಯುತ್ತಾರೆ. ನಿಮಿಲನ ಕಾಲ ರಾತ್ರಿ 10.59ಕ್ಕೆ ಪ್ರಾರಂಭವಾಗಿ, ಮಧ್ಯಕಾಲ ರಾತ್ರಿ 11.41ಕ್ಕೆ, ಉನ್ಮಿಲನ ಕಾಲ ರಾತ್ರಿ 12.22ಕ್ಕೆ, ಮೋಕ್ಷಕಾಲ ರಾತ್ರಿ 1.26ಕ್ಕೆ ಸಂಭವಿಸುತ್ತದೆ. ಚಂದ್ರಗ್ರಹಣದ ಪೂರ್ಣಾವಧಿ ಸುಮಾರು 3 ಗಂಟೆ 30 ನಿಮಿಷಗಳ ಕಾಲ ಇರಲಿದ್ದು, ಬೆಳಗಿನವರೆಗೂ ಇದು ಗೋಚರಿಸುತ್ತದೆ. ಗ್ರಹಣದ ಸೂತಕಕಾಲವೂ ಇರುವುದರಿಂದ ಜನರು ಧಾರ್ಮಿಕ ಆಚರಣೆಗಳಲ್ಲಿ ವಿಶೇಷ ಎಚ್ಚರಿಕೆ ವಹಿಸುತ್ತಾರೆ.
ಚಂದ್ರಗ್ರಹಣದ ಧಾರ್ಮಿಕ ಮಹತ್ವ
ಆಗಮ ಶಾಸ್ತ್ರಗಳಲ್ಲಿ ದೇವಾಲಯಗಳನ್ನು ಮುಚ್ಚಬೇಕೆಂದು ಎಲ್ಲಿ ಉಲ್ಲೇಖಿಸಿಲ್ಲ. ಆದರೆ ಸಂಪ್ರದಾಯದ ಪ್ರಕಾರ ದೇವಾಲಯಗಳನ್ನು ಗ್ರಹಣದ ಸಮಯದಲ್ಲಿ ಮುಚ್ಚಲಾಗುತ್ತದೆ. ಮರುದಿನ ದೇವರನ್ನು ಪೂಜಿಸುವುದು ರೂಢಿಯಾಗಿದೆ. ಮನೆಯಲ್ಲಿ ದೇವರ ಆರಾಧನೆ ಮಾಡಿ ಪ್ರಾರ್ಥನೆ ಸಲ್ಲಿಸುವುದು ಶ್ರೇಯಸ್ಕರ ಎಂದು ಜ್ಯೋತಿಷಿಗಳು ಅಭಿಪ್ರಾಯ ಪಟ್ಟಿದ್ದಾರೆ. ಗರ್ಭಿಣಿಯರು ಈ ಸಮಯದಲ್ಲಿ ಯಾವುದೇ ಕೆಲಸಗಳನ್ನು ಮಾಡದೆ ವಿಶ್ರಾಂತಿ ಪಡೆಯಲು ಸೂಚನೆ ನೀಡಲಾಗಿದೆ. ಜೊತೆಗೆ ಗ್ರಹಣದ ದಿನ ಭೋಜನ ಮಾಡಬಾರದು ಎಂಬುದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ.