ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು- ಕೇರಳ ರಾಜ್ಯ ಘಟಕ – ‘ ಮಕ್ಕಳ ನುಡಿಸಿರಿ ‘ ತ್ರೈ ಮಾಸಿಕ ಪತ್ರಿಕೆಗೆ,ಮಕ್ಕಳಿಂದ ಕಿರು ಕವನ, ಚುಟುಕು,ಸಣ್ಣ ಕತೆ, ಪ್ರಬಂಧಗಳ ಆಹ್ವಾನ
ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಸ್ಥಾಪಿತವಾದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕಳೆದ 12 ವರ್ಷಗಳಿಂದ ಸತತವಾಗಿ ಮಕ್ಕಳಿಗೆ ರಾಷ್ಟ್ರ ರಾಜ್ಯ ಮಟ್ಟದಲ್ಲಿ ಪ್ರದಾನ ವೇದಿಕೆಯನ್ನು ಕಲ್ಪಿಸುವ ಮೂಲಕ ಪ್ರತಿಭಾ ಅನಾವರಣಕ್ಕೆ ಅವಕಾಶವನ್ನು ನೀಡುತ್ತಾ ಬಂದಿರುತ್ತದೆ.
ವಿಶ್ವ ಮಟ್ಟದಲ್ಲಿ ಅಸಂಖ್ಯಾತ ಪ್ರತಿಭಾವಂತ ಮಕ್ಕಳಿದ್ದು ಆ ಮಕ್ಕಳನ್ನು ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಪರಿಸರ,ಸಂಸ್ಕೃತಿಯ ಮುಖ್ಯ ವಾಹಿನಿಗೆ ತರುವ ಮತ್ತೊಂದು ಮಹತ್ತರವಾದ ಕಾರ್ಯವನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೈಗೊಂಡಿರುತ್ತದೆ.
ರಾಷ್ಟ್ರ,ರಾಜ್ಯ ಗಡಿನಾಡು ಹೊರನಾಡುಗಳನ್ನು ಕೇಂದ್ರೀಕರಿಸಿ ಕಾರ್ಯವೆಸಗುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮುಖ ವಾಣಿಯಾಗಿ ‘ಮಕ್ಕಳ ನುಡಿಸಿರಿ’-ಎಂಬ ಮಕ್ಕಳಿಂದ ಮಕ್ಕಳಿಗಾಗಿ – ತ್ರೈಮಾಸಿಕ ಕನ್ನಡ ಪತ್ರಿಕೆಯನ್ನು ಇದೇ ನವಂಬರ್ ನಲ್ಲಿ ಪ್ರಕಟಿಸಿ ಹೊರತರಲು ‘ಸಂಪಾದಕೀಯ ಮಂಡಳಿ’ ತೀರ್ಮಾನಿಸಿದೆ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಷ್ಟ್ರ, ರಾಜ್ಯ,ಜಿಲ್ಲಾ ತಾಲೂಕು ಘಟಕದ ವ್ಯಾಪ್ತಿಯಲ್ಲಿರುವ ಹೈಸ್ಕೂಲ್ ವಿಭಾಗ (4 ರಿಂದ 18 ವರ್ಷದ ಒಳಗಾಗಿ )ದ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ,ಪರಿಸರ , ಸಂಸ್ಕೃತಿ ಇತಿಹಾಸವನ್ನು ಅಧ್ಯಯನ ಮಾಡುವ ಉದ್ದೇಶದಿಂದ, ಮಕ್ಕಳಿಂದಲೇ ಸ್ವತ: ಕೈಬರಹದಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಅಂತಹ ಮಕ್ಕಳು ತಮ್ಮ ಬರಹಗಳನ್ನು ಮೊಬೈಲ್ ನಲ್ಲಿ ಟೈಪ್ ಮಾಡಿ (PDF FILE )ನಮ್ಮ ವಾಟ್ಸಪ್ ಮೊಬೈಲ್ ಹಾಗೂ ಇ ಮೇಲ್ ಕಳುಹಿಸಬೇಕು.
ಮಕ್ಕಳು ಬರೆಯುವ ಬರಹಗಳು ಹೀಗಿರಬೇಕು : ಕಿರು ಕವನ, ಕವಿತೆ ,ಸಣ್ಣ ಕಥೆ, ವೈಚಾರಿಕ ಲೇಖನಗಳು, ಪ್ರಬಂಧ ( ನಮ್ಮ ಪರಿಸರ, ಮಕ್ಕಳ ಹಕ್ಕುಗಳು,ಕನ್ನಡ ಭಾಷಾಭಿಮಾನ, ನಮ್ಮೂರ ಇತಿಹಾಸ,ನನ್ನ ಕನಸು) ಈ ವಿಷಯಗಳು ಮುಂತಾದ ಸ್ವರಚಿತ ಬರಹಗಳನ್ನು ಮೂರು ಪುಟಗಳ ವ್ಯಾಪ್ತಿಯಲ್ಲಿರಬೇಕು ಬರಹಗಳ ಕೊನೆಯಲ್ಲಿ ಮಕ್ಕಳ ಹೆಸರು, ಮನೆ ಮತ್ತು ಶಾಲೆಯ ವಿಳಾಸ,ತರಗತಿ, ತಂದೆ, ತಾಯಿಯ ಹೆಸರು ಮೊಬೈಲ್ ಸಂಖ್ಯೆ,ವಯಸ್ಸಿನ ದಾಖಲೆಗಾಗಿ ಆಧಾರ್ ಜೆರಾಕ್ಸ್ ಪ್ರತಿಯೊಂದಿಗೆ ಸ್ವ ದೃಢೀಕರಣ ಪತ್ರ ಆಯಾಯ ಶಾಲೆಯ ಮುಖ್ಯೋಪಾಧ್ಯಾಯರ ಶಿಫಾರಸು ಪತ್ರದೊಂದಿಗೆ ಕಳುಹಿಸಬೇಕು.
ಸಂಪರ್ಕ ವಿಳಾಸ :- ಶಿವರಾಮ ಕಾಸರಗೋಡು ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು,ಕನ್ನಡ ಗ್ರಾಮ,ಪಾರೆಕಟ್ಟೆ ಕನ್ನಡ ಗ್ರಾಮರಸ್ತೆ,ಕಾಸರಗೋಡು – 671121
ವಾಟ್ಸ್ ಪ್ ಮೊಬೈಲ್ ಸಂಖ್ಯೆ :-9448572016,
9901951965
ಇಮೇಲ್ :-
Shivarama kasaragod @ gmail. Com ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬಹುದು. ಮಕ್ಕಳ ಹೆತ್ತವರ ಹೆಸರು,ಪೂರ್ಣ ವಿಳಾಸ,ಮೊಬೈಲ್ ಸಂಖ್ಯೆಯನ್ನು ಕವರಿನಲ್ಲಿ ಬರೆಯಬೇಕು. ಈ ಪ್ರಕಟಣೆಯಲ್ಲಿ ಉಲ್ಲೇಖಿಸಿದ ಬರಹಗಳನ್ನು ಕನ್ನಡದಲ್ಲಿ ಟೈಪ್ ಮಾಡಿ (PDF FILE) ನಲ್ಲಿ ಕಳುಹಿಸಬೇಕು.ತಮ್ಮ ಮಕ್ಕಳು ಕೈ ಬರಹಗಳನ್ನು ದಿನಾಂಕ 30 ಸೆಪ್ಟೆಂಬರ್ 2025.ರ ಮುಂಚಿತವಾಗಿ ಮೇಲಿನ ವಿಳಾಸಕ್ಕೆ ಕಳುಹಿಸಬೇಕು.
ಶಿವರಾಮ ಕಾಸರಗೋಡು ಅಧ್ಯಕ್ಷರು
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು
ಕೇರಳ ರಾಜ್ಯ ಘಟಕ ಕನ್ನಡ ಗ್ರಾಮ ಕನ್ನಡ ಗ್ರಾಮ ರಸ್ತೆ ಕಾಸರಗೋಡು 671121
ಮೊಬೈಲ್ :-9448572016,
9901951965
ದಿನಾಂಕ :-27-08-2025
ಸ್ಥಳ :-ಕನ್ನಡ ಗ್ರಾಮ, ಕಾಸರಗೋಡು