ಉಜಿರೆ: ಧರ್ಮಸ್ಥಳ ಕೇಸ್ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತೊಮ್ಮೆ ಮಾತಾಡಿದ್ದಾರೆ. ಸತ್ಯ ಬಿಟ್ಟು ನಾವು ಎಲ್ಲೂ ಹೋಗಲ್ಲ, ಹೋಗೋದು ಇಲ್ಲ. ಸತ್ಯಕ್ಕೆ ಎರಡು ಮುಖಗಳು ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ನಿಮ್ಮೆಲ್ಲರ ಆಗಮನದಿಂದ ನನಗೆ ಇನ್ನಷ್ಟು ಧೈರ್ಯ ಬಂದಿದೆ ಎಂದು ಜೈನರ ಜೊತೆಗಿನ ಸಭೆಯಲ್ಲಿ ವೀರೇಂದ್ರ ಹೆಗ್ಗಡೆ ಮಾತಾಡಿದ್ದಾರೆ
ಜೈನ ಸಮುದಾಯದಿಂದ ಜಾಥಾ
ಇಂದು ರಾಜ್ಯದ ಜೈನ ಸಮುದಾಯದಿಂದ ಧರ್ಮಸ್ಥಳ ಚಲೋ ಜಾಥಾ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಮೂಲೆ ಮೂಲೆಯಿಂದ ಜೈನರು ಧರ್ಮಸ್ಥಳಕ್ಕೆ ಆಗಮಿಸಿದ್ರು. ಧರ್ಮಾಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಈ ವೇಳೆ ನಾವೆಲ್ಲಾ ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳ ಪರವಾಗಿ ಇರ್ತೀವಿ ಎಂದು ಪ್ರತಿಜ್ಞೆ ಮಾಡಿದ್ದಾರೆ.
ವೀರೇಂದ್ರ ಹೆಗ್ಗಡೆ ಮಾತು
ಸಭೆಯನ್ನು ಉದ್ದೇಶಿಸಿ ಮಾತಾಡಿದ ವೀರೇಂದ್ರ ಹೆಗ್ಗಡೆ ಅವರು ಇವತ್ತು ಈ ಕ್ಷೇತ್ರಕ್ಕೆ ಇಷ್ಟೊಂದು ಜನ ಬಂದಿರೋದು ಖುಷಿ ಕೊಟ್ಟಿದೆ. ನಿಮ್ಮದೇ ಸಮಸ್ಯೆ ಇದ್ದರೂ ಎಲ್ಲ ಕೆಲಸ ಬಿಟ್ಟು ಬಂದಿದ್ದೀರಾ. ನಾವು ನಿಮ್ಮ ಜೊತೆಗೆ ಇದ್ದೇವೆ ಅಂತ ಎಲ್ಲರೂ ಹೇಳ್ತಾ ಇದ್ದಾರೆ ಖುಷಿಯಾಗಿದೆ ಎಂದ್ರು.
ಎಸ್ಐಟಿ ತನಿಖೆ ನಡೀತಿದೆ
ಕೇಳಿ ಬಂದಿರೋ ಆರೋಪಗಳ ಬಗ್ಗೆ ನಾನು ಈಗ ಹೆಚ್ಚಿಗೆ ಏನು ಮಾತನಾಡಲ್ಲ. ಎಸ್ ಐ ಟಿ ತನಿಖೆ ನಡೀತಾ ಇದೆ. ಹೀಗಾಗಿ ಏನು ಮಾತನಾಡಬೇಡಿ ಅಂದಿದ್ದಾರೆ. ನೀವು ನನ್ನ ಜೊತೆ ಇದ್ದೀವಿ ಅಂದಿರೋದು ತುಂಬಾ ಖುಷಿ ಕೊಟ್ಟಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಸತ್ಯಕ್ಕೆ ಎರಡು ಮುಖ ಇಲ್ಲ
ಅದ್ರಲ್ಲೂ ಹೆಣ್ಣು ಮಕ್ಕಳು ಕೂಡ ಎಂತಹ ಹೋರಾಟಕ್ಕೂ ಸಿದ್ಧವಾಗಿದ್ದಾರೆ. ಸತ್ಯ ಬಿಟ್ಟು ನಾವು ಎಲ್ಲೂ ಹೋಗಲ್ಲ, ಹೋಗೋದು ಇಲ್ಲ. ಸತ್ಯಕ್ಕೆ ಎರಡು ಮುಖಗಳು ಇಲ್ಲ. ನಿಮ್ಮ ಪೂಜ್ಯರೆಲ್ಲಾ ಬಂದಿರೋದು ಖುಷಿ ಕೊಟ್ಟಿದೆ ಎಂದ್ರು.
ನನಗೆ ಧೈರ್ಯ ಕೂಡ ಬಂದಿದೆ
ಸಭೆಯನ್ನು ಉದ್ದೇಶಿಸಿ ಮಾತು ಮುಂದುವರಿಸಿದ ವೀರೇಂದ್ರ ಹೆಗ್ಗಡೆ ಅವರು ನನಗೆ ಇನ್ನಷ್ಟು ಧೈರ್ಯ ಕೂಡ ಬಂದಿದೆ. ಇವತ್ತು ನೀವೆಲ್ಲ ಬಂದಿರೋದು ಮತ್ತಷ್ಟು ಶಕ್ತಿ ನೀಡಿದಂತೆ ಆಗಿದೆ. ಈ ಕಾರ್ಯಕ್ರಮಕ್ಕೆ ಬಂದಿರೋ ಎಲ್ಲರಿಗೂ ಧನ್ಯವಾದ ಹೇಳ್ತೀನಿ. ಮಂಜುನಾಥನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ. ಎಲ್ಲಾ ಪೂಜ್ಯರಿಗೂ ನನ್ನ ಹಾಗೂ ನನ್ನ ಕುಟುಂಬದಿಂದ ಧನ್ಯವಾದಗಳು ಎಂದಿದ್ದಾರೆ.