ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ( ರಿ ) ಟೂರಿಸ್ಟ್ ಬಸ್ ಮತ್ತು ಸರ್ವಿಸ್ ಬಸ್ ಏಜೆಂಟರು ಸರ್ವಿಸ್ ಬಸ್ ನಿಲ್ದಾಣ ವತಿಯಿಂದ ಉಡುಪಿ ಬೋರ್ಡ್ ಶಾಲೆಯಲ್ಲಿ ಏಕ ದಿನದ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಅದ್ದೂ ರಿಯಾಗಿ ನಡೆಯಿತು. ಶ್ರೀ ದೇವರ ಸನ್ನಿಧಿಯಲ್ಲಿ ಅರ್ಚಕ ಉದಯ ತಂತ್ರಿ ಧಾರ್ಮಿಕ ಪೂಜಾ ಕಾರ್ಯ ನಡೆಸಿಕೊಟ್ಟರು. ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠೆ, ಗಣಹೋಮ, ಮಹಾಪೂಜೆ, ರಂಗಪೂಜೆ, ಹೂವಿನ ಪೂಜೆ ನಡೆಯಿತು. ಪ್ರಸಿದ್ಧ ಕಲಾವಿದರಿಂದ ಸಂಗೀತ ರಸಮಂಜರಿ, ಸಂಜೆ ವಿಸರ್ಜನಾ ಪೂಜೆ ಬಳಿಕ ಮಂಗಳವಾದ್ಯ ಬಿರುದಾವಳಿಯೊಂದಿಗೆ ಶೋಭಾ ಯಾತ್ರೆ ಬಸ್ ನಿಲ್ದಾಣ ದಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ಸರೋವರದಲ್ಲಿ ವಿಸರ್ಜನೆ ನಡೆಯಿತು. ಸಮಿತಿಯ ಗೌರವ ಅಧ್ಯಕ್ಷರಾದ ಪ್ರಸಾದ್ ಬಲ್ಲಾಳ್, ಗಣನಾಥ ಹೆಗ್ಡೆ , ಸುರೇಶ ಪೂಜಾರಿ, ದಿನೇಶ್ ಆಚಾರ್ಯ, ತುಕಾರಾಮ್ ಶೆಣೈ, ಶಾಸಕ ಯಶಪಾಲ್ ಸುವರ್ಣ, ಪ್ರಸಾದ್ ರಾಜ್ ಕಾಂಚನ್, ಮಾಜಿ ಶಾಸಕ ರಘುಪತಿ ಭಟ್ ಭೇಟಿ ನೀಡಿದರು. ಅಧ್ಯಕ್ಷರಾದ ವಿನಯರಾಜ್ ನಿಡಂಬಳ್ಳಿ, ಉಪಾಧ್ಯಕ್ಷ ನವೀನ್ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಸಚಿನ್ ಗಾಣಿಗ , ಸುರೇಂದ್ರ ಜೋಗಿ, ಸುಧಾಕರ್ ಪೂಜಾರಿ ಸುರೇಶ ಆಚಾರ್, ಶರತ್ ಮೋಹನ್ ಹಾಗೂ ಸಮಿತಿಯ ಸದಸ್ಯರು ಬಸ್ ಏಜೆಂಟರುಗಳು ಉಪಸ್ಥರಿದ್ದರು.

