ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮಂಗಳೂರು ಹೊಸಪೇಟೆಯನ್ನು ಸಂಪರ್ಕಿಸುವ ರಾಷ್ಟ್ರೀಯ ರಸ್ತೆ ಪ್ರಾಧಿಕಾರದ ಭೂ ವ್ಯಾಜ್ಯ ಪರಿಹಾರ ಸಂಬಂಧ ಸುಮಾರು ಎರಡು ಕೋಟಿ 78 ಲಕ್ಷ 70000 ದಷ್ಟು ಹಣವನ್ನು ಪರಿಹಾರವಾಗಿ ಸ್ಥಳವಾರಿಸುದಾರರಿಗೆ ನೀಡಲಾಯಿತು. ಒಟ್ಟು 18 ಸರ್ವೇ ನಂಬರ್ಗಳಲ್ಲಿ ಇರುವ ಪುತ್ತಿಗೆಯ ಆರು ಮಂದಿಗೆ, ತೊಡಾರಿನ ಒಬ್ಬರಿಗೆ, ಬಡಗ ಮಿಜಾರಿನ ಒಬ್ಬರಿಗೆ, ಪಡು ಮಾರ್ನಾಡಿನ ಇಬ್ಬರಿಗೆ ಹಾಗೂ ಸಾಣೂರಿನ ಒಬ್ಬರು ಸ್ಥಳವಾರೀಸುದಾರರಿಗೆ ಹಣವನ್ನು ಸಂದಾಯ ಮಾಡಲಾಗಿದೆ ಎಂದು ರಾಷ್ಟ್ರೀಯ ರಸ್ತೆ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.