ಮೂಡುಬಿದಿರೆ: ಆ.31ರಂದು ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ಇರುವುದರಿಂದ ಬೆಳಗ್ಗೆ 8.30 ಹಾಗೂ ಮಧ್ಯಾಹ್ನ 2 ಗಂಟೆಯ ನಂತರ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಸಮಾಜ ಮಂದಿರದಲ್ಲಿರುವ ಶ್ರೀ ಸಾರ್ವಜನಿಕ ಗಣೇಶ ದೇವರ ವಿಸರ್ಜನಾ ಮೆರವಣಿಗೆ ಪ್ರಯುಕ್ತ ಬೆಳಗ್ಗೆ 8:30 ಗಂಟೆಯಿಂದ ಹುಲಿ ಕುಣಿತ ಇತರ ಕಾರ್ಯಕ್ರಮಗಳು ಪೇಟೆಯಲ್ಲಿ ಪ್ರಾರಂಭವಾಗುವುದರಿಂದ ಸಾರ್ವಜನಿಕರು ಬೆಳಗ್ಗೆಯಿಂದಲೇ ಮೂಡಬಿದ್ರೆ ಪೇಟೆಗೆ ಬಂದು ವಾಹನಗಳನ್ನು ಪಾರ್ಕಿಂಗ್ ಮಾಡಬಾರದಾಗಿ ವಿನಂತಿಸಿಕೊಳ್ಳಲಾಗಿದೆ. ಹಾಗೂ ಮಧ್ಯಾಹ್ನ 2-00 ಗಂಟೆಯ ನಂತರ ಸಂಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದು ಮೂಡಬಿದ್ರೆ ಪೇಟೆಗೆ ವಾಹನಗಳು ಬಾರದಂತೆ ನಿರ್ಬಂಧಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ವಾಹನಗಳನ್ನು ಮೂಡಬಿದ್ರೆಯ ನಗರಕ್ಕೆ ತರದೇ ಮೂಡಬಿದ್ರೆಯ ಹೊರವರ್ತುಲ (ಬೈಪಾಸ್) ರಸ್ತೆಯಲ್ಲಿ ವಿಸರ್ಜನ ಮೆರವಣಿಗೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ಮುಗಿಯುವವರೆಗೂ ಸಂಚರಿಸ ಬೇಕಾಗಿ ಪೊಲೀಸ್ ಇಲಾಖೆಯ ಪರವಾಗಿ ಪೊಲೀಸ್ ನಿರೀಕ್ಷಕ ಸಂದೇಶ್ ಪಿ ಜಿ. ತಿಳಿಸಿದ್ದಾರೆ.