‘ಅರೇ ಮಿಸ್ಟರ್ ಲೋಫರ್ ಸಮೀರ್..’ ರಾಯಚೂರಲ್ಲಿ ಮಲ್ಲಿಕಾರ್ಜುನ ಬಾಳೆಕಾಯಿ ತೀವ್ರ ವಾಗ್ದಾಳಿ

0
60

ರಾಯಚೂರು: ಧರ್ಮಸ್ಥಳ ಸೇರಿದಂತೆ ವಿವಿಧ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರೋಧಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಾಳೆಕಾಯಿ, ತೀವ್ರ ವಾಗ್ದಾಳಿ ನಡೆಸಿದರು.

ರಾಯಚೂರಿನ ವೀರ್ ಸಾವರ್ಕರ್ ಅಸೋಸಿಯೇಶನ್ ಆಯೋಜಿಸಿದ್ದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಾದ ಶಬರಿಮಲೈ, ತಿರುಪತಿ, ಮತ್ತು ಧರ್ಮಸ್ಥಳದಂತಹ ಪವಿತ್ರ ಸ್ಥಳಗಳ ವಿರುದ್ಧ ಕೆಲವರು ಕಳಂಕ ತರುವ ಯತ್ನ ಮಾಡುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಕೆಲವು ಹಿಂದೂಗಳೇ ಒಡನಾಡಿಯಾಗಿರುವುದು ದುರಂತ ಎಂದರು.

ಧರ್ಮಾಧಿಕಾರಿಗಳ ಚಪ್ಪಲಿಗೆ ಇವರು ಸಮಾನರಲ್ಲ:

ಧರ್ಮಸ್ಥಳದ ಬಗ್ಗೆ ಹೇಳಿಕೆ ನೀಡಲು ಇವರಿಗೆ ಯಾವ ನೈತಿಕತೆ ಇದೆ? ಧರ್ಮಾಧಿಕಾರಿಗಳ ಚಪ್ಪಲಿಗೂ ಇವರು ಸಮಾನರಲ್ಲ! ಎಂದು ಕಿಡಿಕಾರಿದರು. ಡಾ.ಮಲ್ಲಿಕಾರ್ಜುನ ಬಾಳೆಕಾಯಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಕೊಡುಗೆಗಳನ್ನು ಶ್ಲಾಘಿಸಿದರು. ವೀರೇಂದ್ರ ಹೆಗಡೆಯವರು ಸಾವಿರಾರು ದೇವಾಲಯಗಳಿಗೆ ಅನುದಾನ ನೀಡಿದ್ದಾರೆ, ಭಜನಾ ಕೇಂದ್ರಗಳನ್ನು ತೆರೆದಿದ್ದಾರೆ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ. ಆದರೆ ಕೆಲವು ಕ್ರಿಮಿಕೀಟಗಳು ಮತ್ತು ನರಿನಾಯಿಗಳು ಧರ್ಮಸ್ಥಳದ ಹೆಸರನ್ನು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುಟ್ಯೂಬರ್ ಸಮೀರ್‌ಗೆ ‘ಮಿಸ್ಟರ್ ಲೋಫರ್’ ಎಂದ ಬಾಳೆಕಾಯಿ:

ಧರ್ಮಸ್ಥಳ ಅಪಪ್ರಚಾರದ ಹಿಂದೆ ಕ್ರಿಶ್ಚಿಯನ್ ಸಂಸ್ಥೆಗಳ ಕೈವಾಡವಿದೆ ಎಂದು ಆರೋಪಿಸಿದ ಅವರು, ಯೂಟ್ಯೂಬರ್ ಸಮೀರ್ ಮುಲ್ಲಾ ಅವರನ್ನು ‘ಮಿಸ್ಟರ್ ಲೋಫರ್’ ಎಂದು ಕರೆದು, ಅರೇ ಮಿಸ್ಟರ್ ಲೋಫರ್ ಸಮೀರ್.. ಬೆಳಗಾವಿಯಲ್ಲಿ ನಿಮ್ಮ ಧಾರ್ಮಿಕ ಮುಖಂಡ ಅಪ್ರಾಪ್ತೆ ಮೇಲೆ ಅತ್ಯಾ೧ಚಾರ ಮಾಡೋ ಯತ್ನ ಮಾಡಿದ್ದ. ಆಗ ಯಾಕೆ ನೀನು ಹೊರಗಡೆ ಬರಲಿಲ್ಲ ಮಗನೇ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here