ಇಂದು ಸುವರ್ಣ ದಿನಗಳ ಸಂಭ್ರಮದಲ್ಲಿ “ಧರ್ಮಚಾವಡಿ” ತುಳು ಸಿನಿಮಾ

0
196

ಪುತ್ತೂರು: ಮೊದಲ ನಿರ್ಮಾಣದಲ್ಲೇ ಗೆದ್ದ, ನಡುಬೈಲ್ ಜಗದೀಶ್ ಅಮೀನ್ ಮತ್ತು ನಡುಬೈಲು ರವಿಸ್ನೇಹಿತ್ ಇವರು ಕೃಷ್ಣವಾಣಿ ಬ್ಯಾನ‌ರ್ ನಡಿಯಲ್ಲಿ ನಿರ್ಮಿಸಿದ ಚೊಚ್ಚಲ ತುಳು ಸಿನಿಮಾ ಧರ್ಮ ಚಾವಡಿ ಬಹು ತಾರಾಗಣ ಹಾಗೂ ವಿನೂತನ ತಂತ್ರಜ್ಞಾನದೊಂದಿಗೆ ಪ್ರದರ್ಶನಗೊಂಡು ಕಲಾಭಿಮಾನಿಗಳ ಮನ ಗೆದ್ದಿದೆ.

ನಿತಿನ್ ರೈ ಕುಕ್ಕುವಳ್ಳಿ, ನುಳಿಯಾಲು ನಿರ್ದೇಶನದ ಎರಡನೇ ಯಶಸ್ವೀ ಚಿತ್ರ, ದಕ್ಷಿಣ ಭಾರತ, ಉತ್ತರ ಭಾರತದ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನಗೊಂಡು ಸುವರ್ಣ ದಿನಗಳ ಹೆಜ್ಜೆಯಿಟ್ಟಿದೆ. ಮುಂದಿನ ದಿನದಲ್ಲಿ ಬೇರೆ ಬೇರೆ ಭಾಷೆಗಳಿಗೆ ಈ ಚಲನಚಿತ್ರ ವನ್ನು ಕೊಂಡೊಯ್ಯುವ ಪ್ರಯತ್ನ ಮಾಡಲಾಗುವುದು ಎಂದು ನಾಯಕ ನಟ ಹಾಗೂ ನಿರ್ಮಾಪಕ ರವಿಸ್ನೇಹಿತ್ ತಿಳಿಸಿದ್ದಾರೆ. ಅಲ್ಲದೆ ಇದೇ ಬ್ಯಾನರ್‌ನಿಂದ ಹೊಸ ಚಿತ್ರವೊಂದು ಶೀಘ್ರದಲ್ಲಿ ಸೆಟ್ಟೇರಲಿದೆ. ಪುತ್ತೂರಿನ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ಮತ್ತು ಪುಣೆಯ ಚಿಂಚುವಾಡಿ ಫೈನ್ ಆರ್ಟ್ಸ್ ಚಿತ್ರ ಮಂದಿರದಲ್ಲಿ ಏಕ ಕಾಲದಲ್ಲಿ ಪ್ರದರ್ಶನ ಗೊಳ್ಳುತ್ತಿರುವ ಧರ್ಮಚಾವಡಿ ದೇಶವಿದೇಶಗಳಲ್ಲಿ ಪ್ರದರ್ಶನಗೊಂಡು, ಶತದಿನಗಳ ಸಾಧನೆ ಮಾಡಲೆಂದು ಹಾರೈಸೋಣ.
-ನಾರಾಯಣ ರೈ ಕುಕ್ಕುವಳ್ಳಿ.

LEAVE A REPLY

Please enter your comment!
Please enter your name here