ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಹಿರಿಯ ಸಾಹಿತಿ ಪ್ರೊ. ಕೆ. ಈ. ರಾಧಾಕೃಷ್ಣ ಕನ್ನಡಕ್ಕೆ ಅನುವಾದಿಸಿ ಬರೆದ ” ಓರ್ವ ಭಾರತೀಯ ಯಾತ್ರಿಕ -ಒಂದು ಅಪೂರ್ಣ ಆತ್ಮ ಕಥೆ, 2 ಭಾರತೀಯ ಹೋರಾಟ “3. ಅಸಾಮಾನ್ಯ ದಿನಚರಿ ” ಲೋಕಾರ್ಪಣೆ ಕಾರ್ಯಕ್ರಮಗಳು ನಡೆಯಿತು.
ಕರ್ನಾಟಕ ಸರಕಾರ ಅರೋಗ್ಯ ಮಂತ್ರಿ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ನೇತಾಜಿ ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾತನಾಡಿದರು. ಕಾರ್ಯಕ್ರಮ ಮಂಗಳೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ಪಿ ಎಲ್ ಧರ್ಮ ಅದ್ಯಕ್ಷತೆಯಲ್ಲಿ ನಡೆಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಅಣ್ಣ ಶರತ್ ಚಂದ್ರ ಬೋಸ್ ಇವರ ಮೊಮ್ಮಗ, ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಟ್ರಸ್ಟ್ ಕೊಲ್ಕೋತಾ, ನಿರ್ದೇಶಕರಾದ ಪ್ರೊ. ಸುಮಂತ್ರ ಬೋಸ್ ಕಾರ್ಯಕ್ರಮ ದ ಪ್ರದಾನ ಕೇಂದ್ರ ಬಿಂದುವಾಗಿ ಬೋಸ್ ಬಗ್ಗೆ ಸುದೀರ್ಘ ಭಾಷಣ ಮಾಡಿದರು. ಮೂರು ಬ್ರಿಹತ್ ಪುಸ್ತಕಗಳ ಲೇಖಕ ಪ್ರೊ. ಕೆ. ಈ. ರಾಧಾಕೃಷ್ಣ ಪುಸ್ತಕದಲ್ಲಿ ಬರುವ ಹೊಸ ವಿವರ, ವಿಚಾರಗಳ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಕ್ಯಾ. ಗಣೇಶ್ ಕಾರ್ಣಿಕ್, ಶ್ರೀ ನಾರಾಯಣ ಯಾಜಿ, ನೇತಾಜಿ ಬೋಸ್ ಟ್ರಸ್ಟ್ ಬೆಂಗಳೂರು ಅಧ್ಯಕ್ಷ ಶ್ರೀ ಎಂ. ರಾಜಕುಮಾರ್, ಪ್ರಕಾಶಕರಾದ ಸನ್ ಸ್ಟಾರ್ ಡಿ. ಏನ್. ಶೇಖರ್ ರೆಡ್ಡಿ, ಮುಂತಾದ ಹಲವು ಗಣ್ಯರು ವೇದಿಕೆ ಹಂಚಿಕೊಂಡರು.
ಈ ಕಾರ್ಯಕ್ರಮ ದಲ್ಲಿ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಅವರೀಗೆ ನೇತಾಜಿ ಸುಭಾಷ್ ಬೋಸ್ ಇವರ ಮೂರು ಕೃತಿಗಳನ್ನು ಬೋಸ್ ಅವರ ಮೊಮ್ಮಗ ಪ್ರೊ. ಸುಮಂತ್ರ ಬೋಸ್ ಪುಸ್ತಕ ಗೌರವ ಪ್ರತಿಗಳನ್ನು ನೀಡಿ ಗೌರವ ಸೂಚಿಸಿದರು. ಲೇಖಕ ಪ್ರೊ. ಕೆ. ಈ. ರಾಧಾಕೃಷ್ಣ ಸರ್ ನಿರ್ದೇಶನದಲ್ಲಿ ಕಾರ್ಯಕ್ರಮ ನಡೆಯಿತು.

