ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ವಾರ್ಷಿಕ ಸಂಭ್ರಮಾಚರಣೆ

0
154

ಬಂಟ್ವಾಳ: ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.) 9ನೇ ವರ್ಷವನ್ನು ದಾಟಿ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಆ ಪ್ರಯುಕ್ತ ದೇರಳಕಟ್ಟೆಯ ಬೆಳ್ಮ ಸೇವಾಶ್ರಮದಲ್ಲಿ 9ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವು ಆ. ೩೧ರಂದು ನಡೆಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಸೇವಾ ಭಾವ ಚಾರಿಟೇಬಲ್ ಟ್ರಸ್ಟ್ (ರಿ.) ನ ಟ್ರಸ್ಟಿಯಾದ ಶ್ಯಾಮಲಾ ವಿ. ಶೆಟ್ಟಿ, ಸಂಚಾಲಕರಾದ ಗೀತಾ ಆರ್. ಶೆಟ್ಟಿ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ (ರಿ.) ದ.ಕ. ಇದರ ಕಾರ್ಯದರ್ಶಿ ಮನೋಹರ ಪಲಯಮಜಲು, ತುಡರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಇದರ ಸಂಸ್ಥಾಪಕರಾದ ಅಕ್ಷಯ್ ಕಿನ್ನಿಬೆಟ್ಟು, ನಿವೃತ ಶುಶ್ರೂಷಣಾಧಿಕಾರಿ ಪದ್ಮಾವತಿ ಬೋಗ್ರಮೇರು ವಗ್ಗ ಮತ್ತು ಸಂಸ್ಥೆಯ ಸೇವಾ ಮಾಣಿಕ್ಯ ಭುಜೇಶ್ ಪೂಜಾರಿ ಕುಂಬಳೆ ಉಪಸ್ಥಿತರಿದ್ದರು.
ದೀಪಾ ಕೆ. ಪಡಿಯಾರ್ ಪ್ರಾರ್ಥನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅತಿಥಿಗಳನ್ನು ಮತ್ತು ಸೇವಾ ಮಾಣಿಕ್ಯರನ್ನು ದಿವ್ಯ ಪೂಜಾರಿ ನಾಳ ಇವರು ಸ್ವಾಗತ ಭಾಷಣ ನೆರವೇರಿಸಿದರು. ಸಂಸ್ಥೆಯ ಸೇವಾ ಮಾಣಿಕ್ಯರು ಅತಿಥಿಗಳಿಗೆ ತುಳುನಾಡ ಶಾಲು ಹಾಕಿ ಗುಲಾಬಿ ಹೂ ನೀಡಿ ಸ್ವಾಗತಿಸಿದರು.
ಕಾರ್ಯಕ್ರಮದ ಕೇಂದ್ರ ಬಿಂದು ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಇವರಿಗೆ 2025-2026ನೇ ಸಾಲಿನ ತುಳುನಾಡ ಪೊರ್ಲು ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಪತ್ರವನ್ನು ಲತಾ ಧನಂಜಯ ಮಂಗಳೂರು ಇವರು ವಾಚಿಸಿದರು.
3 ಅಶಕ್ತ ಕುಟುಂಬಕ್ಕೆ ಮತ್ತು ಸೇವಾಶ್ರಮಕ್ಕೆ ಧನ ಸಹಾಯ ಹಸ್ತಾಂತರ ಮಾಡಲಾಯಿತು. ನಮ್ಮ ಸಂಸ್ಥೆಯ ವಿಶಿಷ್ಟ ಸೇವಾ ಯೋಜನೆಯಾದ ಭವತಿ ಭಿಕ್ಷಾಂದೇಹಿ ನಿಧಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡ ಹಿರಿಯರು ಯಶೋಧ ಕುಂಭಕಿರಣ ಕರಂಬಾರು ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಸಂಸ್ಥೆಯ ಸೇವಾ ಮಾಣಿಕ್ಯರು ಅತಿಥಿಗಳಿಗೆ ಗೌರವ ಸ್ಮರಣಿಕೆ ನೀಡಿ ವಂದಿಸಿದರು. ಶ್ರೀನಿವಾಸ ಪೂಜಾರಿ ಕಕ್ಯಪದವು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಭವ್ಯ ಕುಪ್ಪೆಪದವು ಧನ್ಯವಾದ ಸಮರ್ಪಿಸಿದರು. ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು ಮತ್ತು ಸವಿತಾ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here