ತುಳು ಚಿತ್ರಪ್ರೇಮಿಗಳ ನೆಚ್ಚಿನ ಭಾವ ಬಂದರು…. ಖ್ಯಾತೀಯ ಪುಷ್ಪರಾಜ್ ಬೋಳಾರ್ ಅವರು ಮತ್ತೊಂದು ಹೊಸ ಅವತಾರದಲ್ಲಿ “ಪಿದಾಯಿ” ಸಿನಿಮಾದ ಮೂಲಕ ನಮ್ಮ ಮುಂದೆ ಬರಲಿದ್ದಾರೆ. ಸೆ. 12ರಂದು ಪಿದಾಯಿ ಚಿತ್ರ ಬಿಡುಗಡೆ ಆಗಲಿದೆ. ಜೀಟಿಗೆ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ಸಂತೋಷ್ ಮಾಡ ಅವರ ನಿರ್ದೇಶನದ ಈ ಪಿದಾಯಿ ಚಿತ್ರವು ಈಗಾಗಲೇ ಬೆಂಗಳೂರಿನಲ್ಲಿ ಎರಡನೇ ಉತ್ತಮ ಚಿತ್ರ ಎಂಬ ಖ್ಯಾತಿ ಪಡೆದುಕೊಂಡಿದೆ. ಶರತ್ ರೋಹಿತಾಶ್ವ ಮುಖ್ಯ ಭೂಮಿಕೆಯಲ್ಲಿರುವ ಪಿದಾಯಿ ಚಿತ್ರವನ್ನು ನಮ್ಮ ಕನಸು ಬ್ಯಾನರ್ ನಡಿ ಕೆ. ಸುರೇಶ್ ನಿರ್ಮಾಣ ಮಾಡಿದ್ದಾರೆ. ರಮೇಶ್ ಶೆಟ್ಟಿ ಕಥೆ ಬರೆದಿರುವ ಪಿದಾಯಿ ಚಿತ್ರದಲ್ಲಿ ರೂಪಾ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ದೀಪಕ್ ರೈ ಪಾಣಾಜೆ ಮುಂತಾದವರು ನಟಿಸಿದ್ದಾರೆ.