ಹೊಕ್ಕಾಡಿಗೋಳಿ: ರವಿ ಎಂಟರ್ ಪ್ರೈಸಸ್ ಮದ್ವ ಇವರ ಪ್ರಾಯೋಜಕತ್ವದಲ್ಲಿ ತುಳುನಾಡ ನೆನಪು ಗ್ರೂಪ್ ಬೆಂಗಳೂರು ಮತ್ತು ಪ್ರಣವೌ ಫೌಂಡೇಶನ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಸ್ನೇಹಕೂಟ ಕಂಬಳವು ಹೊಕ್ಕಾಡಿಗೋಳಿಯ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಕರೆಯಲ್ಲಿ ಸೆ. 19ರಂದು ನಡೆಯಲಿದೆ.
ನೇಗಿಲು ಕಿರಿಯ ಮತ್ತು ನೇಗಿಲು ಸಬ್ ಜ್ಯೂನಿಯರ್ ವಿಭಾಗದಲ್ಲಿ ಕಂಬಳ ನಡೆಯಲಿದೆ. ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಿಂಚಿ ಅಕಾಲಿಕ ಮರಣ ಹೊಂದಿದ ಕೋಣಗಳಿಗೆ ವಿಶೇಷ ನುಡಿನಮನ ಸಲ್ಲಿಸಲಾಗುತ್ತದೆ. ಮಾಂಗಾಜೆ ಯುವ ಸಹೋದರರು ಮತ್ತು ರಥಬೀದಿ ಜನರೆರ್ ಕಾರಿಂಜ ಅವರು ಸ್ನೇಹಕೂಟಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದಾರೆ.