ಕಾರ್ಕಳ: ಅದಿತ್ರಿಯ ಸಿಂಧು ಇವರು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ ಈ ವರ್ಷದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಶೇ. 94 ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇವರು ಕಾರ್ಕಳದ ಸುರೇಖ ಮತ್ತು ದಿನೇಶ್ ಆಚಾರ್ಯರವರ ಸುಪುತ್ರಿ ಹಾಗೂ ಮೂಡಬಿದಿರೆಯ ಸುಖದಾ ಬರ್ವೆಯವರ ಶಿಷ್ಯೆಯಾಗಿದ್ದು, ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

