ಮಹಾವೀರ ಕಾಲೇಜು ಮೂಡುಬಿದಿರೆ: ಎಸ್‌ಎಂಸಿ ಕೋಡಿಂಗ್-ಎಐ ಕ್ಲಬ್‌ ಉದ್ಘಾಟನೆ

0
213

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಎಸ್‌ಎಂಸಿ ಲೀಡರ್ಶಿಪ್ ಸೆಷನ್ ಹಾಗೂ ಎಸ್‌ಎಂಸಿ ಕೋಡಿಂಗ್ ಮತ್ತು ಎಐ ಕ್ಲಬ್‌ ಉದ್ಘಾಟನಾ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.

ಈ ಕಾರ್ಯಕ್ರಮವನ್ನು ಕಾಲೇಜಿನ ಹಳೆ ವಿದ್ಯಾರ್ಥಿ, ಸಂಜಯ್ ಭಟ್ ಸಂಸ್ಥಾಪಕರು, ಮೈಂಡ್ಫುಲ್‌ ಕನ್ಸಲ್ಟಿಂಗ್‌ ಇವರು ಆಯೋಜಿಸಿದರು. ಕಾಲೇಜಿನ ಕೋಡಿಂಗ್ ಮತ್ತು ಎಐ ಕ್ಲಬ್, ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ತೃತೀಯ ಬಿ.ಕಾಂ ಕುಶಾಗ್ರ ಎಸ್. ಪ್ರಭು ವಿನ್ಯಾಸಗೊಳಿಸಿದ ಲೋಗೋವನ್ನು ಅನಾವರಣ ಮಾಡುವ ಮೂಲಕ ಎಸ್‌ಎಂಸಿ ಕೋಡಿಂಗ್ ಮತ್ತು ಎಐ ಕ್ಲಬ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ಲೋಗೋ ಕಾಲೇಜಿನ ಸೃಜನಶೀಲತೆ, ಸಮಷ್ಟಿ ಪ್ರಯತ್ನ ಮತ್ತು ತಂತ್ರಜ್ಞಾನ ಶಕ್ತಿಯ ಸಂಕೇತವಾಗಿದೆ.
ವರ್ಚುವಲ್‌ ರೂಪದ ಎಸ್‌ಎಂಸಿ ನಾಯಕತ್ವ ಉಪನ್ಯಾಸ ಸರಣಿಯ ಏಳನೇ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುದೀಪ್‌ ಜೈನ್, ಬಿಸಿನೆಸ್ ಡೈರೆಕ್ಟರ್, ಸೌತ್‌ ಈಸ್ಟ್ಏ ಷ್ಯಾ, ಹೊಲಾಜಿಕ್, ಸಿಂಗಪುರ್ ಅವರು “ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅವಶ್ಯವಿರುವ ಕೌಶಲ್ಯ, ಅವಕಾಶ ಮತ್ತು ಸವಾಲುಗಳು” ಎಂಬ ವಿಷಯದಕುರಿತು ಮಾತನಾಡಿದರು.

“ಗ್ಲೋಬಲ್ ಕರಿಯರ್‌ ಎಂದರೆ ದೇಶಗಳ ಗಡಿ ಮೀರಿದ ಉದ್ಯೋಗವಲ್ಲ, ಅದು ವ್ಯಕ್ತಿಯ ವಿಶಿಷ್ಟ ಮನೋಭಾವ, ಶಿಸ್ತು ಮತ್ತು ವಿಭಿನ್ನ ಕ್ಷೇತ್ರಗಳಲ್ಲಿ ಮೌಲ್ಯವನ್ನು ಸೃಷ್ಟಿಸುವ ಸಾಮರ್ಥ್ಯಗಳನ್ನು ಒಳಗೊಂಡಿದೆ ಸಿಂಗಪುರ್ ಹಾಗೂ ದಕ್ಷಿಣ ಏಷ್ಯಾದ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ನಿರ್ವಹಿಸಿದ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಗ್ಲೋಬಲ್ ಕರಿಯರ್ ನಿರ್ಮಾಣಕ್ಕೆ ಸ್ಪಷ್ಟದೃಷ್ಟಿಕೋನ ಮತ್ತು ನಿರ್ದಿಷ್ಟಗುರಿ, ಅತ್ಯುತ್ತಮಜ್ಞಾನ ಮತ್ತುಕೌಶಲ್ಯ, ಹೊಂದಿಕೊಳ್ಳುವ ಮತ್ತು ಅವಶ್ಯಕತೆಗೆ ತಕ್ಕಂತೆ ಬದಲಾವಣೆಗೆ ಸಿದ್ಧವಿರುವ ಗುಣ, ಜಗತ್ತಿನ ಪ್ರಚಲಿತ ಸಂಗತಿಗಳ ಅರಿವು, ಸಾಂಸ್ಕೃತಿಕ ಬುದ್ಧಿಮತ್ತೆ ಹಾಗೂ ಸಂವಹನ ಕೌಶಲ್ಯ, ಸಂಪರ್ಕ ಬೆಳೆಸಿಕೊಳ್ಳುವಿಕೆ, ಮಾರ್ಗದರ್ಶನ ಮತ್ತು ನಿರಂತರ ಕಲಿಕೆ, ಆಗ್ಲ ಭಾಷೆಯಅಗತ್ಯತೆ, ಸವಾಲುಗಳನ್ನು ಸ್ವೀಕರಿಸುವ ಧೈರ್ಯ” ಇವು ಅತೀಅಗತ್ಯವಿರುವ ಗುಣಗಳು ಎಂದು ತಿಳಿಸಿದರು. ಈ ಉಪನ್ಯಾಸವು ವಿದ್ಯಾರ್ಥಿಗಳಿಗೆ ಅತೀವ ಸ್ಪೂರ್ತಿದಾಯಕವಾಗಿದ್ದು, ಜಾಗತಿಕದೃಷ್ಟಿಕೋನ ಹೊಂದಿ, ಭವಿಷ್ಯದಉದ್ಯೋಗಕ್ಕೆತಯಾರಾಗಬೇಕೆಂಬ ಮನೋಬಲವನ್ನುತುಂಬಿತು.
ಡಾ. ಕೆ. ಶ್ರೀಧರ ರಂಗನಾಥ.ಪೈ, ಆಡಳಿತಾಧಿಕಾರಿ, ಅಕಾಡೆಮಿಆಫ್ ಹೈಯರ್‌ಎಜುಕೇಶನ್, ಮಣಿಪಾಲ ಇವರು ಉದ್ಘಾಟಿಸಿದರು, ಡಾ.ಅನಿಲ್ ರಾಣಾ, ನಿರ್ದೇಶಕರು, ಎಂಐಟಿ ಮಣಿಪಾಲ ಮತ್ತುಅವರತಂಡಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಜಯ್ ಭಟ್‌ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಅಭಯಚಂದ್ರ ಜೈನ್, ಅಧ್ಯಕ್ಷರು, ಕಾಲೇಜು ಆಡಳಿತ ಮಂಡಳಿ ಇವರು ವಹಿಸಿದ್ದರು, ಸಂಪತ್ ಸಾಮ್ರಾಜ್ಯ, ಉಪಾಧ್ಯಕ್ಷರು, ಕಾಲೇಜು ಆಡಳಿತ ಮಂಡಳಿ ಉಪಸ್ಥಿತರಿದ್ದರು. ತೃತೀಯ ಬಿ.ಕಾಂ ಶ್ರೇಯಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು, ಕಾಲೇಜಿನ ಪ್ರಾಂಶುಪಾಲರುಡಾ. ರಾಧಾಕೃಷ್ಣ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ, ವಂದರ್ನಾಪಣೆಗೈದರು .ತೃತೀಯ ಬಿ.ಕಾಂ ಸಂಜನಾ ನಿರೂಪಿಸಿದರು.

LEAVE A REPLY

Please enter your comment!
Please enter your name here