ಮೂಡುಬಿದಿರೆ ಪೌರ ಕಾರ್ಮಿಕರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ; ಗೌರವ ಸನ್ಮಾನ

0
96

ಮೂಡುಬಿದಿರೆ: ಗಣೇಶೋತ್ಸವದ ವಿಸರ್ಜನಾ ಸಂದರ್ಭದಲ್ಲಿ ಮೂಡುಬಿದಿರೆ ಪೇಟೆಯನ್ನು ಕೆಲವೇ ಗಂಟೆಯೊಳಗಡೆ ಶುಚಿಗೊಳಿಸಿದ ಮೂಡುಬಿದಿರೆಯ 56 ಮಂದಿ ಪೌರಕಾರ್ಮಿಕರನ್ನು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮೂಡುಬಿದಿರೆ ಪುರಸಭಾಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ನಗರ ಕಾಂಗ್ರೆಸ್ ಅಧ್ಯಕ್ಷ ಜೊಸ್ಸಿ ಮಿನೇಜಸ್, ಪುರಸಭಾ ಸದಸ್ಯ ರಾದ ಪಿ.ಕೆ. ಥಾಮಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಇಕ್ಬಾಲ್ ಕರೀಮ್, ರೂಪಾ ಸಂತೋಷ್ ಶೆಟ್ಟಿ, ಶಕುಂತಳಾ ಹರೀಶ್, ಮಮತಾ ಆನಂದ್, ಯುವ ಕಾಂಗ್ರೆಸ್ ಅಧ್ಯಕ್ಷ ಅನೀಶ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಮೂಡಾ ಸದಸ್ಯ ಸತೀಶ್ ಭಂಡಾರಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಇಂಜಿನಿಯರ್ ದಿವಾಕರ್,ಪುರಸಭಾ ನಾಮನಿರ್ದೇಶಿತ ಸದಸ್ಯರಾದ ಕ್ಲಾರಿಯೋ ಸುಶ್ಮಿತ್ ಡಿಸೋಜ, ಅಬ್ದುಲ್ ಲತೀಫ್, ಸತೀಶ್ ಕೋಟ್ಯಾನ್, ವರುಣ್, ಸರಸ್ವತಿ ಶೆಟ್ಟಿ ಹಾಗೂ ಅಭಿನಂದನ್ ಬಲ್ಲಾಳ್,ಸಂತೋಷ್ ಶೆಟ್ಟಿ ಮತ್ತಿತರರು ಹಾಜರಿದ್ದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here