ದಾವಣಗೆರೆ: ದಾವಣಗೆರೆಯ ಗೌಡ ಸಾರಸ್ವತ ಸಮಾಜದ ವತಿಯಿಂದ ಇತ್ತೀಚಿಗೆ ಸಮಾಜದ ಮತ್ತು ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವದ ಪ್ರಯುಕ್ತ ಹಿರಿಯರಿಗೆ, ಕಿರಿಯರಿಗೆ ಛೇದ್ಮವೇಷ ಸ್ಪರ್ಧೆ ಹಮ್ಮಿಕೊಂಡಿದ್ದು, ದಾವಣಗೆರೆಯ ಕಲಾಕುಂಚ ಮತ್ತು ಯಕ್ಷರಂಗ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಥಾನದ ಸಂಸ್ಥಾಪಕರೂ ಕಲಾವಿದರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಭೂತರಾಧನೆಯ ಪಂಜುರ್ಲಿ ವೇಷ ಹಾಕಿ ಪ್ರಥಮ ಬಹಮಾನ ಪಡೆದರು.
ನೆರೆದ ಪ್ರೇಕ್ಷಕರು ಅತ್ಯದ್ಭುತವಾದ ಈ ಭೂತರಾಧನೆಯ ವೇಷಭೂಷಣ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಗೌಡ ಸಾರಸ್ವತ ಸಮಾಜ ಸೇರಿದಂತೆ, ಬಿಚ್ಕತ್ತಿ ಕುಟುಂಬ, ದಾವಣಗೆರೆಯ ಕಲಾಕುಂಚ ಮತ್ತು ಯಕ್ಷರಂಗ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಥಾನ, ಕರಾವಳಿ ಮಿತ್ರ ಮಂಡಳಿ ಪದಾಧಿಕಾರಿಗಳು, ಸರ್ವ ಸದಸ್ಯರು, ಮೆಚ್ಚುಗೆಯಿಂದ ಅಭಿಮಾನದಿಂದ ಅಭಿನಂದನೆ ಸಲ್ಲಿಸಿದರು.