ಮೂಡುಬಿದಿರೆ ಬನ್ನಡ್ಕದ ವಿಶ್ವವಿದ್ಯಾಲಯ ಕಾಲೇಜು ಸರಕಾರಿ ಕಾಲೇಜ್ ಆಗಿ ಪರಿವರ್ತನೆಯ ಭರವಸೆ

0
101

ಮೂಡುಬಿದಿರೆ: ಕಾಲೇಜು ಕಲಿಯಲು ಆಸಕ್ತ ಬಡ ಮಕ್ಕಳಿಗೆ ಉಪಕಾರವಾಗುವಂತೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಕನಸಿನ ಕೂಸು ಬನ್ನಡ್ಕದ ವಿಶ್ವವಿದ್ಯಾಲಯ ಕಾಲೇಜು ಪ್ರಾರಂಭವಾಯಿತು. ಮೂಡುಬಿದಿರೆ ಯಿಂದ ಕೂಗಳತೆಯ ದೂರದಲ್ಲಿದ್ದರೂ ಎಕ್ಸಪ್ರೆಸ್ ಬಸ್ಸುಗಳ ನಿಲುಗಡೆಯ ಕೊರತೆಯಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಅನಾನುಕೂಲವಾಯಿತು. ಇದೀಗ ಈ ಬಗ್ಗೆ ವಿದ್ಯಾರ್ಥಿಗಳು, ಶಾಸಕರು ಪ್ರಯತ್ನಕ್ಕೆ ಮುಂದಾಗಿದ್ದಾರೆ.
ವಿಶ್ವ ವಿದ್ಯಾಲಯದಿಂದ ಪಾಂಡಿತ್ಯದ ಉಪನ್ಯಾಸಕರುಗಳು, ಪ್ರೊಫೆಸರ್ ಗಳು ಆಗಮಿಸುತ್ತಿದ್ದಾರೆ. ಆದರೆ ಅವರ ವೇತನ, ಇತ್ಯಾದಿಗಳಿಗೆ ಸರಕಾರದಿಂದ ಅನುದಾನ ದೊರಕುತ್ತಿಲ್ಲ. ಈ ಕಾರಣದಿಂದ ಕಾಲೇಜು ನಿರ್ವಹಣೆ ದುಸ್ತರ ಗೊಂಡಿದೆ. ಹೀಗಾಗಿ ವರ್ಷಂಪ್ರತಿಯಂತೆ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಗೊಳ್ಳುತ್ತಿದೆ. ಅತೀ ಬಡವರ ಶುಲ್ಕ ಕಂಬಳದ ನೇತಾರರು ಭರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ವರ್ಷ 22 ಮಕ್ಕಳು ಅರ್ಜಿ ನೀಡಿದ್ದರೂ, 30 ಕ್ಕಿಂತ ಕಡಿಮೆ ಇರುವ ಕಾರಣ ಒಡ್ಡಿ ಹಿಂತಿರುಗಿಸಿದ ಫಲದಿಂದ ಕೊನೇ ಕ್ಷಣದಲ್ಲಿ ವಿದ್ಯಾರ್ಥಿಗಳು ತೊಂದರೆ ಪಡಬೇಕಾಯಿತು.
ಇದೀಗ ಮುಂದಿನ ವರ್ಷಕ್ಕೆ ಈಗಿನಿಂದಲೇ ಸಿದ್ಧತೆಯನ್ನು ಪ್ರಾರಂಭಿಸಿರುವ ಸಮಿತಿ ಯಾವುದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಹಿಂಜರಿದರೆ ಕಾಲೇಜನ್ನು ಸರಕಾರಿ ಕಾಲೇಜ್ ಆಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಪ್ರೇರಣಾ ದಿನದ ಹೆಸರಿನಲ್ಲಿ ಮಣ್ಣಿನ ಮಗ ಪ್ರಸ್ತುತ ಆಂದ್ರದ ರಾಜ್ಯಪಾಲರಾಗಿರುವ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಬ್ದುಲ್ ನಜೀರ್ ರವರು ಸಂಪೂರ್ಣ ಭರವಸೆ ಹಾಗೂ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇವರ ಬೆಂಬಲ ಹಾಗೂ ಸಹಕಾರದ ಭರವಸೆಯ ಆಧಾರದಲ್ಲಿ ಹಲವಾರು ಸ್ಥಳೀಯ ಮುಂದಾಳುಗಳು ಕೂಡ ಸಹಕರಿಸುವ ಮಾತನಾಡಿರುವುದು ಎಲ್ಲರಿಗೂ ಹುರುಪನ್ನು ನೀಡಿದೆ. ಇದು ಕಾಲೇಜಿನ ಮುಂದಿನ ದೃಢ ಭವಿಷ್ಯದ ದಿಟ್ಟ ಹೆಜ್ಜೆ ಆಗಿಯು ಕಂಗೊಳಿಸುತ್ತಿದೆ.
ಈಗಾಗಲೇ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರು ಹಾಗೂ ಪ್ರೊಫೆಸರ್ ಗಳು ಕೂಡ ಇದಕ್ಕೆ ಪೂರಕವಾಗಿ ಕೆಲಸವನ್ನು ಪ್ರಾರಂಭಿಸಿರುತ್ತಾರೆ ಎನ್ನುವುದು ಸಂತಸ ಕರ ಸಂಗತಿಯಾಗಿದೆ. ಸ್ಥಳೀಯ ಬಡ, ಪ್ರತಿಭಾವಂತ ವಿದ್ಯಾರ್ಥಿಗಳೆಲ್ಲರೂ ಈ ಕಾಲೇಜಿಗೆ ಪ್ರವೇಶ ಪಡೆದಲ್ಲಿ ಕಾಲೇಜು ಮತ್ತೆ ಹಿಂದಿನಂತೆ ಬೆಳೆಯುವುದಕ್ಕೆ, ಬೆಳಗುವುದಕ್ಕೆ ಸಾಧ್ಯವಿದೆ.
ಹಿಂದೆ ಸರಕಾರಿ ಟೂಲ್ಸ್ ಮತ್ತು ಡೈ ಮೇಕಿಂಗ್ನ ಉಪಕರಣಗಳು ಪ್ರಸ್ತುತ ಆ ಕಟ್ಟಡಗಳಲ್ಲಿ ತುಕ್ಕು ಹಿಡಿಯುತ್ತಿದ್ದು ಅವೆಲ್ಲವನ್ನು ಕೂಡ ಸುಸ್ಥಿತಿಯಲ್ಲಿ ತಂದು ಮತ್ತೊಮ್ಮೆ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಅದರ ಪ್ರಯೋಜನವನ್ನು ಪಡೆಯಲು ಅವಕಾಶ ಒದಗಿಸಿದಲ್ಲಿ ಆ ಕೆಲಸವೂ ಫಲಪ್ರದಗೊಳ್ಳಲು ಸಾಧ್ಯವಿದೆ. ಆದರೆ ಅದಕ್ಕೆ ದೃಢ ನಿಶ್ಚಯ, ಸರಕಾರದ ಬೆಂಬಲ ಎಲ್ಲವೂ ಅಗತ್ಯವಿದೆ. 

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here