ಮಂಗಳೂರು: ಸಂತ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ೧೭೧ ನೇ ಜನ್ಮ ದಿನಾಚರಣೆಯನ್ನು ತಾ.೦೭-೦೯-೨೦೨೫ ರಂದು ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಆಶ್ರಯದಲ್ಲಿ, ಗಾಂಧಿನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಆಚರಿಸಲಾಗುವುದು.
ಅಂದು ಪೂರ್ವಾಹ್ನ ಗಂಟೆ ೯.೩೦ ಕ್ಕೆ ಶ್ರೀ ಗೋಕರ್ಣನಾಥ ಕ್ಶೇತ್ರಾಡಳಿತ ಮಂಡಳಿ ಅಧ್ಯಕ್ಷರಾದ ಹೆಚ್. ಜಯರಾಜ್ ಸೋಮಸುಂದರಂ ರವರು ಜ್ಯೋತಿ ಬೆಳಗಿಸಿ ಪೂಜಾ ಹಾಗೂ ಭಜನಾ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ದೀಪಾ ಕಂಫರ್ಟ್ಸ್ನ ಮ್ಯಾನೇಜಿಂಗ್ ಡ್ಯೆರೆಕ್ಟರ್ ಉರ್ಮಿಳಾ ರಮೇಶ್ ಕುಮಾರ್ ಉಪಸ್ಥಿತರಿರುವರು. ಪೂರ್ವಾಹ್ನ ಗಂಟೆ ೯.೩೦ ರಿಂದ ಅಪರಾಹ್ನ ೨.೦೦ ಗಂಟೆಯ ತನಕ ಭಜನಾ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳಿಗೆ ನಿಯೋಜಿತ ಸ್ಪರ್ಧೆಗಳು ನಡೆಯಲಿದೆ.
ಅಪರಾಹ್ನ ೪.೦೦ ಗಂಟೆಯಿಂದ ನಡೆಯುವ ಸಭಾ ಕಾರ್ಯಕ್ರಮವನ್ನು ಡೈರೆಕ್ಟರ್, ನರ‍್ದರ‍್ನ್ ಸ್ಕೈ ಪ್ರಾರ‍್ಟಿಸ್ ಮತ್ತು ಟ್ರಸ್ಟಿ-ಶ್ರೀ ಗೋರ‍್ಣನಾಥ ಕ್ಷೇತ್ರ ಕುದ್ರೋಳಿಯ ಕೀತೀನ್ ಡಿ ಅಮೀನ್ ರವರು ಉದ್ಘಾಟಿಸಲಿರುವರು. ಈ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಜ್ಯೋತಿ ಚೇಳ್ಯಾರು, ಪ್ರಾಂಶುಪಾಲರು, ಸರಕಾರಿ ಪದವಿ ಪರ‍್ವ ಕಾಲೇಜು , ಚೇಳ್ಯಾರು ಭಾಗವಹಿಸಲಿರುವರು.
ಗುರುವರ್ಯರ ಭಾವಚಿತ್ರದ ಶೋಭಾಯಾತ್ರೆ
ಸಾಯಂಕಾಲ ೬ ಗಂಟೆಗೆ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಿಂದ ಹೊರಟ ಗುರುವರ್ಯರ ಭಾವಚಿತ್ರದ ಶೋಭಾಯಾತ್ರೆಯು ಕೀಲುಕುದುರೆ, ಕರಗ ನೃತ್ಯ, ಕೋಲಾಟ ಹಾಗೂ ವಿವಿಧ ವೇಷ ಭೂಷಣಗಳೋಂದಿಗೆ ಮಣ್ಣಗುಡ್ಡೆ, ಕಂಬ್ಳ ಕ್ರಾಸ್ ರಸ್ತೆಯಿಂದಾಗಿ ಶ್ರೀ ಗೋಕರ್ಣನಾಥ ಕ್ಶೇತ್ರಕ್ಕೆ ತಲುಪುವುದು. ಈ ಎಲ್ಲಾ ಪುಣ್ಯ ಕಾರ್ಯಕ್ರಮಗಳಲ್ಲಿ ಸರ್ವರೂ ಭಾಗವಹಿಸಬೇಕೆಂದು ವಿನಂತಿಸಲಾಗಿದೆ.