ದಕ್ಷಿಣ ಕನ್ನಡ:ವಿಶ್ವಹಿಂದೂ ಪರಿಷದ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ, ದ.ಕ. ಜಿಲ್ಲೆ ಹಾಗೂ ಇತರ ಸಂಘಟನೆಗಳ ಒಕ್ಕೂಟದೊಂದಿಗೆ ಜಾಗೃತಿ ಸಭೆ ಸೆಪ್ಟೆಂಬರ್ 9ರಂದು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾನೂನಿನ ನೆಪದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ತಡೆಯೊಡ್ಡುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಬೃಹತ್ ಈ ಜನಾಗ್ರಹ ಸಭೆ 2025 ಸೆಪ್ಟೆಂಬರ್ 9ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಗೋರಕ್ಷನಾಥ ಮಂದಿರ, ಕದ್ರಿ ಪಾರ್ಕ್ ಬಳಿ, ಮಂಗಳೂರು ಇಲ್ಲಿ ನಡೆಯಲಿದ್ದು, ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಸುವ ಜೊತೆಗೆ ಈ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ತೊಡಗಿಸಿಕೊಂಡಿರುವ ಸಾವಿರಾರು ಕುಟುಂಬಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಈ ಬೃಹತ್ ಜನಾಗ್ರಹ ಸಭೆಯನ್ನು ಏರ್ಪಡಿಸಲಾಗಿದ್ದು ತುಳುನಾಡಿನ ಜನರು ಅತ್ಯಧಿಕ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಭಾಗವಹಿಸಲು ಕರೆ ನೀಡಲಾಗಿದೆ.

ಪಟ್ಲ ಸತೀಶ್ ಶೆಟ್ಟಿ – ಯಕ್ಷ ದ್ರುವ ಫೌಂಡೇಶನ್ ಅಧ್ಯಕ್ಷರು ಮತ್ತು ಸಂಚಾಲಕರು ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಡಾ. ದೇವದಾಸ್ ಕಾಪಿಕಾಡ್ – ಚಲನಚಿತ್ರ ನಟರು, ನಾಟಕ ರಂಗಭೂಮಿ ಕಲಾವಿದರು ಮತ್ತು ಸಂಚಾಲಕರು ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಲಯನ್ ಕಿಶೋರ್ ಡಿ ಶೆಟ್ಟಿ – ಲಕುಮಿ ತಂಡದ ಅಧ್ಯಕ್ಷರು ಮತ್ತು ಸಂಚಾಲಕರು ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ – ಅಧ್ಯಕ್ಷರು ಜಾನಪದ ಪರಿಷದ್ ದಕ ಜಿಲ್ಲೆ ಮತ್ತು ಸಂಚಾಲಕರು ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಶರಣ್ ಪಂಪುವೆಲ್ – ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಮತ್ತು ಸಂಚಾಲಕರು ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಎಚ್ ಕೆ ಪುರುಷೋತ್ತಮ – ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರು ಮತ್ತು ಸಂಚಾಲಕರು ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಶಿವಾದ್ ಮೆಂಡನ್ – ವಿಶ್ವ ಹಿಂದೂ ಪರಿಷತ್ ವಿಭಾಗ ಸಹಕಾರ್ಯದರ್ಶಿ ಮತ್ತು ಸಂಚಾಲಕರು ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ಧನರಾಜ್ ಶೆಟ್ಟಿ – ಅಧ್ಯಕ್ಷರು ದಕ ಜಿಲ್ಲಾ ಸೌಂಡ್ಸ್ ಅಂಡ್ ಲೈಟ್ಸ್ ಮತ್ತು ಸಂಚಾಲಕರು ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ
ಮಧು ಬಂಗೇರ ಕಲ್ಲಡ್ಕ – ನಾಟಕ ಸಂಗೀತ ನಿರ್ದೇಶಕರ ಒಕ್ಕೂಟದ ಅಧ್ಯಕ್ಷರು ಮತ್ತು ಸಂಚಾಲಕರು ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ
ಕೃಷ್ಣ ಮಂಜೇಶ್ವರ – ಶಾರದಾ ಆರ್ಟ್ಸ್ ಮಂಜೇಶ್ವರ ತುಷಾರ್ ಸುರೇಶ್ – ಅಧ್ಯಕ್ಷರು ಫ್ಲವರ್ ಡೆಕೋರೇಷನ್ ರಾಜೇಶ್ ಸ್ಕೈಲಾರ್ಕ್ – ಚಲನಚಿತ್ರ ನಟ ಮತ್ತು ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ತು ಪತ್ರಿಕಾಗೋಷ್ಠಿ ಉಪಸ್ಥಿತರಿದ್ದರು.