ಅತ್ಯುತ್ತಮವಾದ ರಿಟೇಲ್ ಮತ್ತು ಡೀಲರ್ ಫೈನಾನ್ಸ್ ಸೌಲಭ್ಯವನ್ನು ಒದಗಿಸಲು ಹೆಚ್‌ಡಿಎಫ್‌ಸಿ ಬ್ಯಾಂಕ್ ಜೊತೆಗೆ ಸಹಭಾಗಿತ್ವ ಮಾಡಿಕೊಂಡ ಸಿಟ್ರೊಯೆನ್ ಇಂಡಿಯಾ

0
57


• ಹೆಚ್‌ಡಿಎಫ್‌ಸಿ ಬ್ಯಾಂಕ್ ಭಾರತದಲ್ಲಿ ಸ್ಟೆಲಾಂಟಿಸ್ ಬ್ರಾಂಡ್‌ ಗಳಿಗೆ ಆದ್ಯತೆಯ ಫೈನಾನ್ಸಿಯರ್ ಆಗಿದೆ. ಈ ಹಿಂದೆ ಜೀಪ್, ಮಸೆರಾಟಿಗೆ ಫೈನಾನ್ಸ್ ಒದಗಿಸುತ್ತಿದ್ದು, ಇದೀಗ ಸಿಟ್ರೊಯೆನ್ ಉತ್ಪನ್ನಗಳಿಗೆ ಒದಗಿಸಲಿದೆ.
• ಗ್ರಾಹಕರು ಸ್ಪರ್ಧಾತ್ಮಕ ಬಡ್ಡಿ ದರಗಳು, ಆಕರ್ಷಕ ಮರುಪಾವತಿ ಆಯ್ಕೆಗಳು ಮತ್ತು 30 ನಿಮಿಷಗಳಲ್ಲಿ ಡಿಜಿಟಲ್ ವಿತರಣಾ ಸೌಲಭ್ಯಗಳ ಜೊತೆಗೆ ಯಾವುದೇ ಕಾಗದದ ಕೆಲಸವಿಲ್ಲದ ಹೆಚ್‌ಡಿಎಫ್‌ಸಿ ಎಕ್ಸ್‌ ಪ್ರೆಸ್ ಕಾರ್ ಲೋನ್ ಪಡೆಯಲಿದ್ದಾರೆ.
• ಹೆಚ್‌ಡಿಎಫ್‌ಸಿ ಬ್ಯಾಂಕ್‌ ನ ವ್ಯಾಪಕ ನೆಟ್ ವರ್ಕ್ ಮತ್ತು ವಿಶ್ವಾಸಾರ್ಹ ಪರಂಪರೆಯನ್ನು ಬಳಸಿಕೊಂಡು ಈ ಪಾಲುದಾರಿಕೆ ಮೂಲಕ ಗ್ರಾಹಕರು ಮತ್ತು ಡೀಲರ್‌ಗಳು ಫೈನಾನ್ಸಿಂಗ್ ಸೌಲಭ್ಯ ಪಡೆಯಲಿದ್ದಾರೆ.
ರಾಷ್ಟ್ರೀಯ, ಸೆಪ್ಟೆಂಬರ್ 02, 2025- ಸುಲಭವಾಗಿ ವಾಹನ ಖರೀದಿಸಲು ಸಾಧ್ಯವಾಗಲು ಗ್ರಾಹಕರಿಗೆ ಮತ್ತು ಸುಲಭವಾಗಿ ವಾಹನ ಒದಗಿಸಲು ಡೀಲರ್ ಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಅತ್ಯುತ್ತಮ ಫೈನಾನ್ಸ್ ಸೌಲಭ್ಯ ಒದಗಿಸಲು ಸಿಟ್ರೊಯೆನ್ ಇಂಡಿಯಾ ಕಂಪನಿಯು ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್‌ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.
ಈ ಒಪ್ಪಂದವು ಸ್ಟೆಲಾಂಟಿಸ್ ಮತ್ತು ಹೆಚ್‌ಡಿಎಫ್‌ಸಿ ನಡುವಿನ ಬಂಧವನ್ನು ಮತ್ತಷ್ಟು ಬಲಪಡಿಸಲಿದ್ದು, ಈ ಮೂಲಕ ಹೆಚ್‌ಡಿಎಫ್‌ಸಿ ಬ್ಯಾಂಕ್ ಭಾರತದಲ್ಲಿ ಜೀಪ್, ಮಸೆರಾಟಿ ಮತ್ತು ಈಗ ಸಿಟ್ರೊಯೆನ್ ಸೇರಿದಂತೆ ಎಲ್ಲಾ ಸ್ಟೆಲಾಂಟಿಸ್ ಬ್ರಾಂಡ್‌ ಗಳಿಗೆ ಏಕೈಕ ಆದ್ಯತೆಯ ಫೈನಾನ್ಸಿಯರ್ ಆಗಿದೆ.
ಈ ಒಪ್ಪಂದಕ್ಕೆ ಸ್ಟೆಲಾಂಟಿಸ್ ಇಂಡಿಯಾದ ಬಿಸಿನೆಸ್ ಹೆಡ್ ಮತ್ತು ಸ್ಟ್ರಾಟೆಜಿಕ್ ಪಾರ್ಟನರ್ ಶಿಪ್ ಹಾಗೂ ಇನ್ ಸ್ಟಿಟ್ಯೂಷನಲ್ ಬಿಸಿನೆಸ್ ಡೈರೆಕ್ಟರ್ ಶಿಶಿರ್ ಮಿಶ್ರಾ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್‌ ನ ಆಟೋ ಲೋನ್ಸ್, ಇನ್ವೆಂಟರಿ ಫೈನಾನ್ಸ್ ಮತ್ತು ಟೂ ವೀಲರ್ ಲೋನ್ಸ್‌ ವಿಭಾಗದ ಬಿಸಿನೆಸ್ ಹೆಡ್ ಶ್ರೀ ಅಖಿಲೇಶ್ ಕುಮಾರ್ ರಾಯ್ ಸಹಿ ಹಾಕಿದರು. ಈ ಸಂದರ್ಭದಲ್ಲಿ ಸ್ಟೆಲಾಂಟಿಸ್ ಇಂಡಿಯಾ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್‌ ನ ಹಲವಾರು ಹಿರಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹೆಚ್‌ಡಿಎಫ್‌ಸಿ ಬ್ಯಾಂಕ್‌ ಭಾರತದಾದ್ಯಂತ ವ್ಯಾಪಕ ನೆಟ್ ವರ್ಕ್ ಹೊಂದಿದೆ ಮತ್ತು ಎರಡು ದಶಕಗಳಿಗೂ ಹೆಚ್ಚು ಕಾಲ ವಿಶ್ವಾಸಾರ್ಹ ಆಟೋಮೊಬೈಲ್ ಫೈನಾನ್ಸಿಯರ್ ಆಗಿ ಹೆಸರು ಗಳಿಸಿದೆ. ಹಾಗಾಗಿ ಈ ಪಾಲುದಾರಿಕೆಯು ಸಿಟ್ರೊಯೆನ್ ಗ್ರಾಹಕರು ಮತ್ತು ಡೀಲರ್ ಗಳಿಗೆ ಅತ್ಯುತ್ತಮ ಆರ್ಥಿಕ ಬೆಂಬಲವನ್ನು ನೀಡಲಿದೆ. ಗ್ರಾಹಕರಿಗೆ ಈ ಪಾಲುದಾರಿಕೆಯು ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ಒದಗಿಸಲಿದ್ದು, ಸುಲಭವಾಗಿ ವಾಹನ ಹೊಂದಲು ಅನುವು ಮಾಡಿಕೊಡಲಿದೆ.

ಹೆಚ್‌ಡಿಎಫ್‌ಸಿ ಎಕ್ಸ್‌ ಪ್ರೆಸ್ ಕಾರ್ ಲೋನ್ ಇದರಲ್ಲಿ ವಿಶಿಷ್ಟ ಫೀಚರ್ ಆಗಿದ್ದು, ಈ ಮೂಲಕ ಶೇ. 100 ಡಿಜಿಟಲ್ ಇಂಟರ್‌ಫೇಸ್ ಮೂಲಕ 30 ನಿಮಿಷಗಳಲ್ಲಿ ಸಾಲ ವಿತರಣೆಯನ್ನು ಮಾಡಲಾಗುತ್ತದೆ. ಈ ಸೌಲಭ್ಯವು ಉದ್ಯಮದಲ್ಲಿಯೇ ಪ್ರಮುಖವಾಗಿದ್ದು, ಯಾವುದೇ ಭೌತಿಕ ದಾಖಲೆಗಳ ಅಗತ್ಯವಿಲ್ಲದೆ ಸಾಲ ಪಡೆಯಬಹುದಾಗಿದೆ. ಈ ಫೀಚರ್ ಕಾರ್ ಖರೀದಿ ಪ್ರಕ್ರಿಯೆಯನ್ನು ಸರಳ, ವೇಗ ಮತ್ತು ಗ್ರಾಹಕ ಸ್ನೇಹಿಯಾಗಿಸುತ್ತದೆ. ಆಟೋ ಲೋನ್‌ಗಳು ಹೆಚ್‌ಡಿಎಫ್‌ಸಿ ಬ್ಯಾಂಕ್‌ ನ ರಿಟೇಲ್ ಆಸ್ತಿಗಳ ವಿಭಾಗಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದ್ದು, ಜೂನ್ 30, 2025 ರ ಪ್ರಕಾರ ಬ್ಯಾಂಕ್‌ ನ ಆಟೋ ಲೋನ್ ಬುಕ್ ರೂ. 1.48 ಲಕ್ಷ ಕೋಟಿಗಿಂತ ಹೆಚ್ಚಿದೆ.
ಸಿಟ್ರೊಯೆನ್ ಡೀಲರ್ ಗಳಿಗೆ ಈ ಮೂಲಕ ದೈನಂದಿನ ಕಾರ್ಯಾಚರಣೆ ಮತ್ತು ಅಭಿವೃದ್ಧಿಗೆ ನೆರವಾಗುವ ಕಸ್ಟಮೈಸ್ಡ್ ಫ್ಲೋರ್‌ಪ್ಲಾನ್ ಫೈನಾನ್ಸ್ ಉತ್ಪನ್ನಗಳನ್ನು ಒದಗಿಸಲಾತ್ತದೆ. ಡೀಲರ್‌ ಗಳು ಈ ಮೂಲಕ ಸ್ಪರ್ಧಾತ್ಮಕ ದರಗಳು ಮತ್ತು ಅವರ ವ್ಯಾಪಾರದ ಅಗತ್ಯಗಳಿಗೆ ಸರಿಹೊಂದುವ ವಿವಿಧ ಆರ್ಥಿಕ ಉತ್ಪನ್ನಗಳ ಲಾಭ ಪಡೆಯುತ್ತಾರೆ. ಈ ಪಾಲುದಾರಿಕೆಯು ಸದಾಕಾಲ ಬಂಡವಾಳ ಇರುವಂತೆ ಮತ್ತು ಇನ್ವೆಂಟರಿ ಫಂಡಿಂಗ್‌ ಪ್ರಕ್ರಿಯೆ ಸುಲಭವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ವಿಶೇಷವಾಗಿ ಡೀಲರ್‌ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ.
ಈ ಕುರಿತು ಮಾತನಾಡಿದ ಸ್ಟೆಲಾಂಟಿಸ್ ಇಂಡಿಯಾದ ಬಿಸಿನೆಸ್ ಹೆಡ್ ಮತ್ತು ಸ್ಟ್ರಾಟೆಜಿಕ್ ಪಾರ್ಟನರ್ ಶಿಪ್ ಹಾಗೂ ಇನ್ ಸ್ಟಿಟ್ಯೂಷನಲ್ ಬಿಸಿನೆಸ್ ಡೈರೆಕ್ಟರ್ ಶಿಶಿರ್ ಮಿಶ್ರಾ ಅವರು, “ಕಾರ್ ಖರೀದಿ ವಿಚಾರದಲ್ಲಿ ಫೈನಾನ್ಸಿಂಗ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಹೊಸ ಕಾಲದ ಗ್ರಾಹಕರು ತಮ್ಮ ಜೀವನಶೈಲಿ ಮತ್ತು ಅನುಕೂಲಕ್ಕೆ ಹೊಂದಿಕೊಳ್ಳುವ ಸ್ಮಾರ್ಟ್ ಆದ, ಹೊಂದಿಕೊಳ್ಳುವ ಫೈನಾನ್ಸಿಂಗ್ ಸೌಲಭ್ಯಗಳನ್ನು ಹೆಚ್ಚಾಗಿ ಬಯಸುತ್ತಾರೆ. ಅವರು ತಮ್ಮ ಕಾರ್ ಖರೀದಿ ಪ್ರಕ್ರಿಯೆಯಲ್ಲಿ ವೇಗ, ಪಾರದರ್ಶಕತೆ ಮತ್ತು ಅನುಕೂಲತೆ ಇರಬೇಕು ಎಂದುಕೊಳ್ಳುತ್ತಾರೆ. ಅದರಿಂದ ವಿನೂತನ ಫೈನಾನ್ಸ್ ಆಯ್ಕೆಗಳು ಈಗ ಚಾಲಕಶಕ್ತಿಯಾಗಿವೆ. ಸಿಟ್ರೊಯೆನ್‌ ಸಂಸ್ಥೆಯಲ್ಲಿ ನಾವು ನಮ್ಮ ಗ್ರಾಹಕರು ಮತ್ತು ಪಾಲುದಾರರಿಗೆ ಹೆಚ್ಚು ಅನುಕೂಲತೆ ಒದಗಬೇಕು ಎಂಬುದನ್ನು ನಂಬುತ್ತೇವೆ. ಹೆಚ್‌ಡಿಎಫ್‌ಸಿ ಬ್ಯಾಂಕ್‌ ಜೊತೆಗಿನ ಈ ಪಾಲುದಾರಿಕೆಯು ನಮ್ಮ ಫೈನಾನ್ಸಿಂಗ್ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ಸಮಗ್ರ, ಅನುಕೂಲಕರ ಮತ್ತು ವಿಶ್ವಾಸಾರ್ಹ ಅನುಭವಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಹೆಚ್‌ಡಿಎಫ್‌ಸಿ ಬ್ಯಾಂಕ್‌ ನ ರಿಟೇಲ್ ಅಸೆಟ್ಸ್ ವಿಭಾಗದ ಗ್ರೂಪ್ ಹೆಡ್ ಶ್ರೀ ಅರವಿಂದ್ ವೋಹ್ರಾ ಅವರು, “ಸಿಟ್ರೊಯೆನ್‌ ಬ್ರಾಂಡ್ ಗೆ ಅತ್ಯುತ್ತಮ ಆಟೋ ಫೈನಾನ್ಸಿಂಗ್ ವ್ಯವಸ್ಥೆ ಒದಗಿಸಲು ನಾವು ಸಂತೋಷ ಹೊಂದಿದ್ದೇವೆ. ಹೆಚ್‌ಡಿಎಫ್‌ಸಿ ಬ್ಯಾಂಕ್‌ ನ ವಿಶಾಲ ಭೌಗೋಳಿಕ ವ್ಯಾಪ್ತಿ, ಗ್ರಾಹಕ ಕೇಂದ್ರಿತ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ದೃಢವಾದ ಕ್ರೆಡಿಟ್ ಇಂಟೆಲಿಜೆನ್ಸ್ ಸಾಮರ್ಥ್ಯಗಳು ವೇಗವಾಗಿ ವಾಹನ ಮಾಲೀಕತ್ವ ಹೊಂದಲು ಸಹಾಯ ಮಾಡಲಿದೆ” ಎಂದು ಹೇಳಿದರು.
ವಾರ್ಷಿಕೋತ್ಸವ ಆಫರ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು Citroën.in ಗೆ ಭೇಟಿ ನೀಡಬಹುದು ಅಥವಾ ತಮ್ಮ ಹತ್ತಿರದ ಶೋರೂಮ್ ಅನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here