ಮೂಡುಬಿದಿರೆ: ಎಸ್‌ಎಂಸಿ ಕೋಡಿಂಗ್, ಎಐ ಕ್ಲಬ್‌ಮತ್ತು ಮೈಂಡ್‌ಫುಲ್‌ಕನ್ಸ್ಲ್ಟಿಂಗ್ ವತಿಯಿಂದ ಪ್ರಥಮ ಬಾರಿಗೆ“ಮೈಕ್ರೋಸಾಫ್ಟ್ ನವರಿಂದ ಉಪನ್ಯಾಸ ಕಾರ್ಯಕ್ರಮ”ವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು. ಮೈಕ್ರೋಸಾಫ್ಟ್ ನ ಕರಣ್ ಎಂ.ವಿ., ನಿರ್ದೇಶಕರು, ಅಂತರಾಷ್ಟ್ರೀಯ ಡೆವಲಪರ್ ರಿಲೇಶನ್ಸ್ ಗಿಟ್ ಹಬ್ ಅವರು ವಿದ್ಯಾರ್ಥಿಗಳಿಗೆ ಆನ್ಲೈ ನ್ ಮೂಲಕ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಕೋಡಿಂಗ್ ಏಕೆ ಮುಖ್ಯ, ಕೋಡಿಂಗ್ ಕ್ಲಬ್ ನಿರ್ಮಾಣ ಹೇಗೆ ಮಾಡಬೇಕು ಹಾಗೂ ವಿದ್ಯಾರ್ಥಿಗಳು ಪ್ರೋಗ್ರಾಮಿಂಗ್ ಭಾಷೆಯ ಪ್ರಮುಖ ಕೌಶಲ್ಯಗಳನ್ನು ಹೇಗೆ ಅಳವಡಿಸಿಕೊಳ್ಳ ಬೇಕು ಎಂಬುವುದನ್ನು ತಿಳಿಸಿದರು.ಉಪನ್ಯಾಸಕಾರ್ಯಕ್ರಮದ ನಂತರವಿದ್ಯಾರ್ಥಿಗಳಪ್ರಶ್ನೆಗಳಿಗೆ ಉಪಯುಕ್ತ ಉತ್ತರಗಳನ್ನು ನೀಡಿ ಸಂವಹನ ನಡೆಸಿದರು.ಈ ಉಪನ್ಯಾಸವು ವಿದ್ಯಾರ್ಥಿಗಳಿಗೆ ಜ್ಞಾನ ವಿಸ್ತರಣೆ ಮಾಡುವುದರಜೊತೆಗೆ, ತಂತ್ರಜ್ಞಾನದಲ್ಲಿ ಹೊಸ ಅವಕಾಶಗಳನ್ನು ಹುಡುಕಲು ಪ್ರೇರಣೆ ನೀಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಅಭಯಚಂದ್ರಜೈನ್, ಅಧ್ಯಕ್ಷರು, ಕಾಲೇಜು ಆಡಳಿತ ಮಂಡಳಿ ಇವರು ವಹಿಸಿದ್ದರು. ಮೋಹನ್ ಶೆಣೈ, ಡಾ.ಚೈತ್ರಾಎಮ್. ಐ. ಟಿ ಮಣಿಪಾಲ್ ಇವರುಗಳು ಆನ್‌ಲೈನ್ ಮೂಲಕ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಆಯೋಜಕರಾದ ಕಾಲೇಜಿನ ಹಳೆ ವಿದ್ಯಾರ್ಥಿ, ಸಂಜಯ್ ಭಟ್, ಸಂಸ್ಥಾಪಕರು, ಮೈಂಡ್ಫುಲ್‌ಕನ್ಸಲ್ಟಿಂಗ್ ಇವರು ಸ್ವಾಗತಿಸಿದರು. ಡಾ. ರಾಧಾಕೃಷ್ಣ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಚಾಟ್‌ಜಿಪಿಟಿ ಪ್ರಾಂಪ್ಟ್ ಚಾಂಪಿಯನ್ಸ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Home Uncategorized ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ : ಎಸ್‌ಎಂಸಿಕೋಡಿಂಗ್ ಮತ್ತು ಎಐ ಕ್ಲಬ್ ಮೈಕ್ರೋಸಾಫ್ಟ್ ಅವರಿಂದ ಉಪನ್ಯಾಸ...