ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮೂರನೇ ಶುಕ್ರವಾರ (ಸೋಣ ಶುಕ್ರವಾರ) ನಿನ್ನೆ (ಸೆ. ೫) ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಧ್ಯಾಹ್ನದ ಹೊತ್ತಿಗೆ ಸುಮಾರು ೨೫ ಸಾವಿರಕ್ಕೂ ಹೆಚ್ಚಿನ ಭಕ್ತರು ದೇವರ ದರ್ಶನ ಪಡೆದಿದ್ದು, ಹೊರಗಿನ ಆವರಣದಲ್ಲಿ ೧೦೮ ಮಕ್ಕಳಿಗೆ ಅನ್ನಪ್ರಾಸನ ಭಕ್ತಾಧಿಗಳಿಂದ ಸಾವಿರಾರು ಹೂವಿನ ಪೂಜೆ ಶ್ರೀ ದೇವಿಗೆ ಸಮರ್ಪಣೆ ಆಗಿತ್ತು. ಶುಕ್ರವಾರ ಸರಕಾರಿ ರಜೆ ಇದ್ದುದರಿಂದ ಬೆಳಿಗ್ಗೆಯಿಂದಲೇ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದು, ದೇವಳದ ರಸ್ತೆಯಲ್ಲಿ ಕೆಲವೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.